ಸೌದಿ: ಐ.ಎಸ್.ಎಫ್ ವತಿಯಿಂದ ಭಾರತದಲ್ಲಿ ನಡೆಯುವ ಗುಂಪು ಹತ್ಯೆಯ ಕುರಿತು ಅಭಿಯಾನ

ಸೌದಿ ಅರೇಬಿಯಾ,ಆ.28 : ಇಂಡಿಯನ್ ಸೋಶಿಯಲ್ ಫೋರಂ ತಬೂಕ್ ಘಟಕ ಸೌದಿ ಅರೇಬಿಯಾ ಇದರ ವತಿಯಿಂದ "ಭಾರತದಲ್ಲಾಗುವ ಗುಂಪು ಹತ್ಯೆಯ ವಿರುದ್ಧ ಪ್ರತಿರೋಧಿಸೋಣ" ಕಾರ್ಯಕ್ರಮು ಇತ್ತೀಚೆಗೆ ಫ್ರಟರ್ನಿಟಿ ಹೌಸ್ ತಬೂಕ್ ಇದರ ಸಭಾಂಗಣದಲ್ಲಿ ನಡೆಯಿತು.
ಇಂಡಿಯನ್ ಸೋಷಿಯಲ್ ಫೋರಂ ತಬೂಕ್ ಇದರ ಅಧ್ಯಕ್ಷರಾದ ಅಬ್ದುಲ್ ಲತೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಬ್ದುಲ್ ಮಜೀದ್ ವಿಟ್ಲ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನಿಷಾದ್ ಪಾಲಕ್ಕಾಡ್ (ಪ್ರಧಾನ ಕಾರ್ಯದರ್ಶಿ ಇ೦ಡಿಯನ್ ಸೋಷಿಯಲ್ ಫೋರಂ ತಬೂಕ್), ಕಬೀರ್ ವಯನಾಡ್ (ಅಧ್ಯಕ್ಷರು ಇ೦ಡಿಯಾ ಫೆಟರ್ನಿಟಿ ಫೋರಂ ತಬೂಕ್) , ಡಾ. ಆಸೀಫ್ ಕೋಯಿಕ್ಕೋಡ್ (ವೈದ್ಯರು ಕಿ೦ಗ್ ಫಹಾದ್ ಹಾಸ್ಪಿಟಲ್ ತಬೂಕ್), ಹಾಫಿಳ್ ಇರ್ಫಾನ್ ಕಾಪು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೂರಾರು ಆನಿವಾಸಿ ಭಾರತೀಯರು ಭಾಗವಹಿಸಿದ್ದರು. ತನ್ವೀರ್ ಕಾಪು ಕಾರ್ಯಕ್ರಮ ನಿರೂಪಿಸಿದರು.
Next Story





