ಸೆ.5 ರಂದು ನಗರದಲ್ಲಿ ಚಾತುರ್ಮಾಸ ಆಚರಣೆ: ಸುಬ್ರಮಣ್ಯ ಭಾರತಿ ಸ್ವಾಮಿಜಿ
.jpg)
ಹಾಸನ, ಆ.29: 43ನೆ ಚಾತುರ್ಮಾಸವನ್ನು ಸೆಪ್ಟಂಬರ್ 5 ರಂದು ನಗರದ ಉತ್ತರ ಬಡಾವಣೆಯಲ್ಲಿರುವ ಮಾತೃಮಂದಿರ ಚಿಕ್ಕಮಗಳೂರು ಕಾಫಿವಕ್ರ್ಸ್ ಇವರ ಗೃಹದಲ್ಲಿ ಆಚರಿಸುವುದಾಗಿ ಶ್ರೀ ಶಂಕರಾನಂದ ಸರಸ್ವತೀ ಮಹಾ ಸಂಸ್ಥಾನ ಕರ್ನೂಲು ಜಿಲ್ಲೆ, ಯಾದವಗಿರಿಯ ಶಾರದಾ ದತ್ತಪೀಠಂನ ಆಂಧ್ರ ಪ್ರದೇಶದ ಶ್ರೀ ಸುಬ್ರಮಣ್ಯ ಭಾರತಿ ಸ್ವಾಮಿಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಐತಿಹಾಸಿಕ ಪರಂಪರೆಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಜೀವನ ಶೈಲಿಯಲ್ಲಿ ಯತಿಪರಂಪರೆಯ ಕೊಡುಗೆ ಅಪಾರ. ಹಿಂದಿನ ದಿನಗಳಲ್ಲಿ ಆರೋಗ್ಯಕರ ಆಹಾರ ಲಭ್ಯವಾಗುತಿತ್ತು. ಆದರೇ ಇಂದಿನ ದಿನಗಳಲ್ಲಿ ವಿಷಕಾರಿ ಆಹಾರ ಬಳಕೆ ಮಾಡುತ್ತಿರುವುದಾಗಿ ಹೇಳಿದರು.
ಭಕ್ತಾಧಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯಕರ ಸಲಹೆಯನ್ನು ಕೊಡುವ ಕೆಲಸ ನಿರಂತರವಾಗಿ ಮಾಡಲಾಗುತ್ತಿದೆ. ಆ ನಿಟ್ಟಿನಲ್ಲಿ ಹಾಸನ ನಗರಕ್ಕೆ ಪ್ರವಾಸ ಮಾಡಿಡುವುದಾಗಿ ಹೇಳಿದರು. ನಮ್ಮ ದೇಶದಲ್ಲಿ ಇರುವ ಬಡವರುಗಳಿಗೆ ಯಾವ ಖರ್ಚುವಿಲ್ಲದೆ ಮನೆ ಮನೆಯಲ್ಲೆ ಉತ್ತಮ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಒಳ್ಳೆಯ ಆರೋಗ್ಯ ಪಡೆಯುವ ಚಮತ್ಕಾರ ಕಾಣಬಹುದು ಎಂದರು.
ರೋಗದಿಂದ ನರಳುವ ಇಲ್ಲವೇ ಸೂಕ್ಷ್ಮ ಮನಸ್ಥತ್ವವುಳ್ಳವರು ಒಂದೇ ಸಲ ನಾಲ್ಕು ಲೋಟ ನೀರು ಕುಡಿಯಲು ಅಸಾಧ್ಯವಾಗಬಹುದು. ಮೊದಲು ಎರಡು ಗ್ಲಾಸ್‍ಗಳಿಂದ ಪ್ರಾರಂಭಿಸುವುದು ಉತ್ತಮ ಎಂದು ಅವರು, ಹಿಂದೆ ಋಷಿ ಮುನಿಗಳು ನೀರಿನ ಮೂಲಕ ಅನುಭವಿಸಿ ಬೆಳಕಿಗೆ ಬಂದ ಆರೋಗ್ಯ ವಿಚಾರವನ್ನು ತಿಳಿಸಲಾಗುತ್ತಿದೆ ಎಂದು ವಿವರಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಭಾಕರ್ ಇತರರು ಉಪಸ್ಥಿತರಿದ್ದರು.







