ಮೂಡಿಗೆರೆ : ಮನೆ ನುಗ್ಗಿ ಕಳ್ಳತನ
ಮೂಡಿಗೆರೆ, ಆ.29: ಮನೆ ಮಂದಿ ಇಲ್ಲದಿದ್ದಾಗ ಮನೆಯ ಬೀಗ ಒಡೆದು ಒಳ ನುಗ್ಗಿರುವ ಕಳ್ಳರು ಅಪಾರ ಪ್ರಮಾಣದ ನಗ, ನಗದು ಕಳ್ಳತನ ಮಾಡಿರುವ ಕುರಿತು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಹಳೇಕೋಟೆ ಗ್ರಾಮದ ಶ್ರೀಮತಿ ಪ್ರೇಮಾ ಎಂಬವರು ಮನೆಗೆ ಬೀಗ ಹಾಕಿಕೊಂಡು ಬಿದರಹಳ್ಳಿಗೆ ಹೋಗಿದ್ದಾಗ ಕೃತ್ಯ ನಡೆದಿದೆ. ಮನೆಯ ಬೀರುವಿನಲ್ಲಿಟ್ಟಿದ್ದ 1.5 ಗ್ರಾಂ ತೂಕದ ಜುಮುಕಿ, 6 ಗ್ರಾಂ ತೂಕದ ಹ್ಯಾಂಗಿಂಗ್ ಓಲೆ, 7 ಗ್ರಾಂ ತೂಕದ ಗಣಪತಿ ಪೆಡೆಟ್, 6 ಗ್ರಾಂ ತೂಕದ ಸರ, 3 ಗ್ರಾಂ, 2.5 ಗ್ರಾಂ, 2 ಗ್ರಾಂ ತೂಕದ ಮೂರು ಉಂಗುರ ಕಳ್ಳತನ ಮಾಡಲಾಗಿದೆ.
ಕಳುವಾರ ಚಿನ್ನದ ಒಡವೆಗಳ ಮೌಲ್ಯ ಸುಮಾರು 70 ಸಾವಿರ ರೂ.ಗಳು ಎಂದು ಅಂದಾಜಿಸಲಾಗಿದೆ. ಅಲ್ಲದೇ 7 ಸಾವಿರ ರೂ.ಗಳ ನಗದು ಹಣವನ್ನು ಕಳ್ಳತನ ಮಾಡಲಾಗಿದೆ.
Next Story





