ಶೀಘ್ರದಲ್ಲೇ ಬಿಡುಗಡೆಯಾಗಲಿದೆಯೇ ನೂತನ 1,000 ರೂ. ನೋಟು?: ಇಲ್ಲಿದೆ ಸತ್ಯಾಂಶ

ಹೊಸದಿಲ್ಲಿ, ಆ.29: ಕಳೆದ ವರ್ಷದ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1000 ರೂ. ನೋಟುಗಳನ್ನು ಅಮಾನ್ಯಗೊಳಿಸಿ ಆದೇಶ ಹೊರಡಿಸಿದ ನಂತರ ಆರ್ ಬಿಐ ಮತ್ತೊಮ್ಮೆ ನೂತನ 1000 ರೂ. ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಲಿದೆ, ನೂತನ ನೋಟುಗಳು ಹೊಸ ವಿನ್ಯಾಸದಲ್ಲಿ ಇರಲಿದೆ ಎನ್ನುವ ಸುದ್ದಿಗಳು ವ್ಯಾಪಕವಾಗಿ ಹರಡಿತ್ತು. ಹಲವು ಮಾಧ್ಯಮಗಳು ಸಹ ಇದನ್ನು ವರದಿ ಮಾಡಿತ್ತು. ಆದರೆ 1000 ರೂ. ನೋಟುಗಳನ್ನು ಮತ್ತೊಮ್ಮೆ ಬಿಡುಗಡೆ ಮಾಡುವ ಯಾವ ಪ್ರಸ್ತಾಪವೂ ಇಲ್ಲ ಎಂದಿರುವ ಹಣಕಾಸು ಸಚಿವಾಲಯ ಸುದ್ದಿಗಳನ್ನು ತಳ್ಳಿ ಹಾಕಿದೆ.
“1000 ರೂ. ಮುಖಬೆಲೆಯ ನೋಟುಗಳನ್ನು ಹೊರತರುವ ಯಾವ ಪ್ರಸ್ತಾಪವೂ ಇಲ್ಲ” ಎಂದು ಹಣಕಾಸು ವ್ಯವಹಾರ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಟ್ವೀಟ್ ಮಾಡಿದ್ದಾರೆ.
1000 ರೂ. ಮುಖಬೆಲೆಯ ನೋಟುಗಳನ್ನು ಮತ್ತೊಮ್ಮೆ ಆರ್ ಬಿಐ ಶೀಘ್ರದಲ್ಲೇ ಬಿಡುಗಡೆ ಮಾಡುತ್ತದೆ ಎನ್ನುವ ವರದಿಗಳು ವೈರಲ್ ಆದ ನಂತರ ಅವರು ಈ ಸ್ಪಷ್ಟನೆ ನೀಡಿದ್ದಾರೆ.
Next Story





