ಗಾಂಜಾ ಸಾಗಣೆ: ಓರ್ವ ಬಂಧನ

ಹನೂರು, ಆ.29: ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ರಾಮಾಪುರ ಪೋಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ರಾಮಾಪುರದ ಗೆಜ್ಜಲನಾತ ನಿವಾಸಿ ಮುರುಗೇಶ್(44) ಎಂದು ತಿಳಿದು ಬಂದಿದೆ.
ಘಟನೆಯ ವಿವರ: ರಾಮಾಪುರ ಗ್ರಾಮದಿಂದ ಬೈಕ್‍ನಲ್ಲಿ 850 ಗ್ರಾಂ ಗಾಂಜವನ್ನು ಸಾಗಿಸುತ್ತಿದ್ದ ಆರೋಪಿಯನ್ನು, ರಾಮಾಪುರ ಪೋಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಶಿವಸ್ವಾಮಿ, ಪಿಎಸ್ಸೈ ಶ್ರೀಧರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
Next Story





