ಆ.30 ರಂದು ಮಠಾಧೀಶರ ನಿರ್ಣಾಯಕ ಸಭೆ
ಬೆಂಗಳೂರು, ಆ. 29: ‘ಲಿಂಗಾಯತ ಧರ್ಮ-ಸ್ವತಂತ್ರ ಧರ್ಮ’ ಮಾನ್ಯತೆ ಸಂಬಂಧ ವಿವಿಧ ಮಠಾಧೀಶರ ನೇತೃತ್ವದಲ್ಲಿ ಆ.30 ಬೆಳಗ್ಗೆ 10:30ಕ್ಕೆ ಇಲ್ಲಿನ ಚಾಲುಕ್ಯ ವೃತ್ತದಲ್ಲಿನ ಬಸವ ಸಮಿತಿ ಸಭಾಂಗಣದಲ್ಲಿ ಜನ ಸಾಮಾನ್ಯರ ವೇದಿಕೆ ಆಶ್ರಯದಲ್ಲಿ ನಿರ್ಣಾಯಕ ಸಭೆಯನ್ನು ಏರ್ಪಡಿಸಲಾಗಿದೆ.
ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಸಿದ್ದರಾಮೇಶ್ವರ ಸ್ವಾಮಿ, ಬೈಲಹೊಂಗಲ ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ತೋಂಟದಾರ್ಯ ಸ್ವಾಮಿ, ಕೂಡಲಸಂಗಮ ಪಂಚಮಸಾಲಿ ಮಠದ ಜಯಮೃತ್ಯುಂಜಯ ಸ್ವಾಮಿ, ಮೈಸೂರಿನ ಬಸವಜ್ಞಾನ ಮಂದಿರ ಪೀಠಾಧ್ಯಕ್ಷೆ ಮಾತಾ ಬಸವಾಂಜಲಿ ಶರಣೆ, ಬೀದರ್ ಬಸವ ಕೇಂದ್ರದ ಮಾತೆ ಅಕ್ಕ ಅನ್ನಪೂರ್ಣ, ತುಮಕೂರಿನ ಕೊರಟಗೆರೆಯ ಬಸವ ಮಹಾಲಿಂಗ ಸ್ವಾಮಿ ಪಾಲ್ಗೊಳ್ಳಲಿದ್ದಾರೆ.
ಅಲ್ಲದೆ, ಬಸವ ಅನುಯಾಯಿ, ನಟ ಚೇತನ್, ಮಾಜಿ ಉಪ ಕುಲಪತಿ ಡಾ. ಪ್ರಭುದೇವ್, ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್, ಹೈಕೋರ್ಟ್ ವಕೀಲ ಅನಂತ್ ನಾಯ್ಕಿ, ವೇದಿಕೆ ರಾಜ್ಯಾಧ್ಯಕ್ಷ ಡಾ.ಡಿ.ಅಯ್ಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





