ಬ್ರಿಕ್ಸ್ ಶೃಂಗಸಭೆಗೆ ಮೋದಿ

ಹೊಸದಿಲ್ಲಿ, ಆ.29: ಚೀನಾದಲ್ಲಿ ಸೆಪ್ಟೆಂಬರ್ 3ರಿಂದ 5ರವರೆಗೆ ನಡೆಯಲಿರುವ ‘ಬ್ರಿಕ್ಸ್’ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶ ವ್ಯವಹಾರ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಡೋಕಾಲಾ ದಲ್ಲಿ ಭಾರತ-ಚೀನಾ ಸೇನಾಪಡೆಗಳ ನಡುವೆ ಕಳೆದ 73 ದಿನಗಳಿಂದ ತಲೆದೋರಿದ್ದ ಬಿಕ್ಕಟ್ಟು ಪರಿಹಾರಗೊಂಡ ಮರುದಿನ ಈ ಪ್ರಕಟಣೆ ಹೊರಬಿದ್ದಿದೆ. ಚೀನಾದ ಅಧ್ಯಕ್ಷರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಚೀನಾದ ಕ್ಸಿಯಾಮೆನ್‌ನಲ್ಲಿ ಸೆಪ್ಟೆಂಬರ್ 3ರಿಂದ 5ರವರೆಗೆ ನಡೆಯಲಿರುವ 9ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಚೀನಾದಿಂದ ಮ್ಯಾನ್ಮಾರ್‌ಗೆ ತೆರಳಲಿರುವ ಮೋದಿ ಸೆಪ್ಟೆಂಬರ್ 7ರವರೆಗೆ ಮ್ಯಾನ್ಮಾರ್‌ನಲ್ಲಿರುತ್ತಾರೆ.
ಮೋದಿ ಮ್ಯಾನ್ಮಾರ್‌ನ ವಿದೇಶಾಂಗ ಸಚಿವೆ ಆಂಗ್ ಸಾನ್ ಸು ಕಿ ಅವರೊಂದಿಗೆ ದ್ವಿಪಕ್ಷೀಯ ಸಹಕಾರ ಸಂಬಂಧದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಹಾಗೂ ಅಧ್ಯಕ್ಷ ಯು ತಿನ್ ಕ್ಯವ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ವಿದೇಶ ವ್ಯವಹಾರ ಇಲಾಖೆಯ ಪ್ರಕಟಣೆ ತಿಳಿಸಿದೆ.





