ಶಿರೂರು ಗ್ರೀನ್ ವ್ಯಾಲಿ ವ್ಯೂ ಪಿಯು ತಂಡ ಚಾಂಪಿಯನ್
ಕುಂದಾಪುರ ಅಂತರ್ ಕಾಲೇಜು ಫುಟ್‌ಬಾಲ್ ಪಂದ್ಯಾಟ

ಶಿರೂರು, ಆ.29: ಉಡುಪಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಶಿರೂರು ಗ್ರೀನ್ ವ್ಯಾಲಿವ್ಯೂ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಆ. 28ರಂದು ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿದ ಕುಂದಾಪುರ ತಾಲೂಕು ಮಟ್ಟದ ಅಂತರ್‌ಕಾಲೇಜು ಫುಟ್‌ಬಾಲ್ ಪಂದ್ಯಾಟದಲ್ಲಿ ಶಿರೂರು ಗ್ರೀನ್ ವ್ಯಾಲಿವ್ಯೂ ತಂಡ ಚಾಂಪಿಯನ್ ಆಗಿ ಮೂಡಿಬಂದಿದೆ.
ಫೈನಲ್ ಪಂದ್ಯಾಟದಲ್ಲಿ ಗಂಗೊಳ್ಳಿ ಎಸ್.ವಿ. ಪಿಯು ಕಾಲೇಜು ತಂಡವನ್ನು 1-0 ಅಂತರದಿಂದ ಸೋಲಿಸುವ ಮೂಲಕ ಗ್ರೀನ್ ವ್ಯಾಲಿವ್ಯೂ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಪಂದ್ಯಾಟದಲ್ಲಿ ಕುಂದಾಪುರ ಭಂಡಾರ್ಕರ್, ಕುಂದಾಪುರ ಆರ್.ಎನ್.ಶೆಟ್ಟಿ, ಕುಂದಾಪುರ ಶ್ರೀವೆಂಕಟರಮಣ ಕಾಲೇಜು, ಬೈಂದೂರು ಸರಕಾರಿ ಕಾಲೇಜು, ಕುಂದಾಪುರ ಸೈಂಟ್ ಮೇರಿಸ್ ಕಾಲೇಜು, ಕುಂದಾಪುರ ಸರಕಾರಿ ಕಾಲೇಜು ತಂಡಗಳು ಭಾಗವಹಿಸಿದ್ದವು.
ಪಂದ್ಯಾಟದಲ್ಲಿ ಉತ್ತಮ ಆಲ್‌ರೌಂಡರ್ ಪ್ರಶಸ್ತಿಯನ್ನು ಗ್ರೀನ್ ವ್ಯಾಲಿವ್ಯೂ ತಂಡದ ಅಬ್ದುಲ್ ಮುಖೀತ್, ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಗ್ರೀನ್ ವ್ಯಾಲಿವ್ಯೂನ ವಾಝ್ ಇಸಾಕ್, ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಗಂಗೊಳ್ಳಿ ಎಸ್‌ವಿ ತಂಡದ ಹಜ್ಮಲ್ ಪಡೆದುಕೊಂಡರು.





