ಡಿಜಿಟಲ್ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಕರೆ

ಭಟ್ಕಳ, ಆ. 29: ಆಧುನಿಕ ಯುಗದಲ್ಲಿ ನಗದು ರಹಿತ ವ್ಯವಹಾರಕ್ಕೆ ಪ್ರಾಮುಖ್ಯತೆ ಹೆಚ್ಚಿದ್ದು ಪ್ರತಿಯೋರ್ವರೂ ಡಿಜಿಟಲ್ ವ್ಯವಸ್ಥೆಗೆ ಹೊಂದಿ ಕೊಳ್ಳಬೇಕಾಗಿದೆ ಎಂದು ಬೆಳಕೆ ಸಿಂಡಿಕೇಟ್ ಬ್ಯಾಂಕ್ ವ್ಯವಸಾ್ಥಪಕ ಕಿರಣ್ ಕೃಷ್ಣನ್ ಹೇಳಿದರು.
ಅವರು ಬೆಳಕೆ ಗ್ರಾಮ ಪಂಚಾಂತ್ ವ್ಯಾಪ್ತಿಯ ಕಾನಮದ್ಲು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ ಭಟ್ಕಳ, ಸಿಂಡಿಕೇಟ್ ಬ್ಯಾಂಕ್ ಬೆಳಕೆ ಜಂಟಿಯಾಗಿ ಆಯೋಜಿಸಿದ್ದ ಗೋಯಿಂಗ್ ಡಿಜಿಟಲ್ ಎನ್ನುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಗದು ರಹಿತ ವ್ಯವಹಾರ ಹಾಗೂ ಆಧುನಿಕ ಬ್ಯಾಂಕ ವ್ಯವಸ್ಥೆ ಬಗ್ಗೆ, ಬ್ಯಾಂಕಿನಲ್ಲಿ ಸಿಗುವ ವಿವಿಧ ಸೌಲ್ಯಭ್ಯಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದ ಅವರು, ಭೀಮ್ ಆ್ಯಪ್ ಪ್ರಾತ್ಯಕ್ಷಿತೆಯ ಮೂಲಕ ಅದರ ಬಳಕೆ ಮತ್ತು ಉಪಯೋಗದ ಬಗ್ಗೆ ತಿಳಿಸಿದರು.
ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಸಂಯೋಜಕ ದಯಾನಂದ ಗುಂಡು ಮಾತನಾಡಿ ಆರ್ಥಿಕ ಸಾಕ್ಷರತೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಸುಕನ್ಯ ಸಮೃದ್ದಿ ಯೋಜನೆ, ಅಟಲ್ ಪೆನಷನ್ ಯೋಜನೆ ಹಾಗೂ ಬ್ಯಾಂಕುಗಳ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷೆಯನ್ನು ಬೆಳಕೆ ಗ್ರಾಮ ಪಂಚಾಯತ ಸದಸ್ಯ ನಾಗಪ್ಪ ನಾಯ್ಕ ವಹಿಸಿದ್ದರು.
ಅತಿಥಿಗಳಾಗಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಸವಿತಾ ಗೊಂಡ, ಯುವಕ ಸಂಘದ ಅಧ್ಯಕ್ಷ ಮಾದೇವ ಗೊಂಡ, ಗ್ರಾಮ ಪಂಚಾಯತ ಸದಸ್ಯೆ ಕೃಷ್ಣಿ ಗೊಂಡ, ಶಾಲಾ ಅಭಿವೃದ್ದಿ ಮತ್ತು ಮೇಲುಸ್ಥುವಾರಿ ಸಮಿತಿ ಅಧ್ಯಕ್ಷ ಗಣಪತಿ ಗೊಂಡ, ಉಪಾದ್ಯಕ್ಷೆ ತಾರಾ ಮೇಶ ನಾಯ್ಕ ಉಪಸ್ಥಿತರಿದ್ದರು.
ಕಿರಿಯ ಆರ್ಥಿಕ ಸಾಕ್ಷರತಾ ಸಂಯೋಜಕಿ ಗೀತಾ ನಾಯ್ಕ ಸ್ವಾಗತಿದರು. ಯುವಕ ಸಂಘದ ಸದಸ್ಯರು, ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರು, ಗ್ರಾಮಸ್ಥರು, ಹಿರಿಯ ನಾಗರಿಕರು ಭಾಗವಹಿಸಿದ್ದರು.







