Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ತನ್ನ ಜೀವದ ಹಂಗು ತೊರೆದು ಮೀನುಗಾರರ...

ತನ್ನ ಜೀವದ ಹಂಗು ತೊರೆದು ಮೀನುಗಾರರ ಪ್ರಾಣ ರಕ್ಷಿಸುವ ಸುರೇಶ್ ಖಾರ್ವಿ

ವಾರ್ತಾಭಾರತಿವಾರ್ತಾಭಾರತಿ29 Aug 2017 10:27 PM IST
share
ತನ್ನ ಜೀವದ ಹಂಗು ತೊರೆದು ಮೀನುಗಾರರ ಪ್ರಾಣ ರಕ್ಷಿಸುವ ಸುರೇಶ್ ಖಾರ್ವಿ

ಭಟ್ಕಳ, ಆ. 29: ಆಪತ್ತಿನಲ್ಲಿ ಸಹಾಯಕ್ಕೆ ಬರುವವನು ಆಪ್ತಮಿತ್ರ. ಮೀನುಗಾರರ ತಮ್ಮ ವೃತ್ತಿ ಬದುಕಿನಲ್ಲಿ ಹಲವು ಆಪತ್ತುಗಳನ್ನು ಎದುರಿಸುವವರು. ತನ್ನ ಪ್ರಾಣದ ಹಂಗು ತೊರೆದು ಇತರರ ಜೀವನ ರಕ್ಷಿಸುವ ಕಲೆಯನ್ನು ಚಿಕ್ಕಂದಿನಿಂದಲೈ ಮೈಗೂಡಿಸಿಕೊಂಡಿರುವ ಮೀನುಗಾರ ಸಮುದಾಯದ ಸುರೇಶ್ ಬಸವ ಖಾರ್ವಿಯವರ ಬದುಕು ಇಡೀ ಸಮಾಜಕ್ಕೆ ಮಾದರಿ.

ಇನ್ನೂ ಮಕ್ಕಳೊಂದಿಗೆ ಆಟವಾಡುತ್ತ ಕಾಲ ಕಳೆಯುವ ವಯೋಮಾನದಲ್ಲಿ ಮೀನುಗಾರಿಕ ವೃತ್ತಿಯನ್ನು ಕಂಡುಕೊಂಡವರು ತಾಲೂಕಿನ ಮಾವಿನಕುರ್ವಾ ಗ್ರಾಮದ ಮೀನುಗಾರಿಕಾ ಸಮುದಾಯದ ಸುರೇಶ್ ಖಾರ್ವಿ. ತನ್ನ 17ನೇ ವಯಸ್ಸಿನಲ್ಲಿ ಮೀನುಗಾರಿಕೆಯನ್ನು ಆರಂಭ ಮಾಡಿದ್ದ ಸುರೇಶ ಬಸವ ಖಾರ್ವಿ ಇಲ್ಲಿಯ ತನಕ ಸುಮಾರು 11 ಜನರ ಪ್ರಾಣ ರಕ್ಷಣೆ ಮಾಡಿ ಅವರೆಲ್ಲರ ಕಣ್ಮಣಿಯಾಗಿದ್ದಾರೆ. ಇವರ ಸಾಹಸಮಯ ಜೀವನದ ಹಿನ್ನೋಟ ಇಲ್ಲಿದೆ.

ತನ್ನ ಮೀನುಗಾರಿಕಾ ವೃತ್ತಿಯಲ್ಲಿ ಮಂಗಳೂರಿನ ಪೂರ್ಣೇಶ್ವರಿ ಬೋಟಿನಿಂದ ಆರಂಭಿಸಿದ್ದ ಇವರು ಮೀನುಗಾರಿಕೆಯನ್ನು ಮಾಡುತ್ತಿರುವಾಗ ಸುಮಾರು 175 ಮೀಟರ್ ಆಳದ ಸಮುದ್ರದಲ್ಲಿದ್ದ ಬೋಟಿನಿಂದ ರಾತ್ರಿ 1:30ರ ಸುಮಾರಿಗೆ ಓರ್ವ ನೀರಿಗೆ ಬಿದ್ದು ಬಿಡುತ್ತಾನೆ. ತಮ್ಮೊಂದಿಗೇ ಕೆಲಸ ಮಾಡುತ್ತಿರುವವನೋರ್ವ ಬಿದ್ದು ಮುಳುಗುತ್ತಿರುವುದನ್ನು ಕಾಣಲಾರದ ಇವರು ಜೀವದ ಹಂಗು ತೊರೆದು ನೀರಿಗೆ ಧುಮುಕುತ್ತಾರೆ. ಇನ್ನೇನು ಮುಳುಗಿ ಪ್ರಾಣ ಕಳೆದುಕೊಳ್ಳಲಿರುವ ತನ್ನ ಸಹೋದ್ಯೋಗಿಯನ್ನು ರಕ್ಷಿಸಿದ ಇವರಿಗೆ ತನ್ನ ಸಹೋದ್ಯೋಗಿಗೆ ಮರುಜೀವ ನೀಡಿದ ಸಂತಸ ತುಂಬುತ್ತದೆ.

ನಂತರದ ದಿನಗಳಲ್ಲಿ ಕೂಡಾ ಬೋಟಿನಲ್ಲಿ ಮೀನುಗಾರಿಕೆ ಮಾಡುತ್ತಿರುವಾಗಲೇ ನೀರಿಗೆ ಬಿದ್ದ ಸುಮಾರು 50 ಮೀಟರ್ ನೀರಿನಲ್ಲಿ ಧುಮುಕಿ ರೋಪ್ ಸಹಾಯದಿಂದ ರಕ್ಷಿಸಿದ್ದಲ್ಲದೇ ಮಂಗಳೂರಿನಲ್ಲಿ ಬೋಟಿನಿಂದ ಬಿದ್ದು ಮುಳುಗುತ್ತಿರುವವನೋರ್ವನನ್ನು ಕೂಡಾ ರಕ್ಷಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಭಟ್ಕಳದ ಮಾವಿನಕುರ್ವೆಯಿಂದ ಮೀನುಗಾರಿಕೆಗೆ ತೆರಳಿ ಬೋಟು ಮಗುಚಿ ನೀರಿಗೆ ಬಿದ್ದ 8 ಜನರು ಕಾರ್ಗತ್ತಲಲ್ಲಿ ಸುಮಾರ 9 ತಾಸಗಳ ಕಾಲ ಈಜಿ ಜೀವ ಹಿಡಿದಿಟ್ಟುಕೊಂಡಿದ್ದರೆ ಅವರನ್ನು ನಡುರಾತ್ರಿಯಲ್ಲಿ ರೋಪ್ ಮೂಲಕ ನೀರಿಗಿಳಿದು ಒಬ್ಬೊಬ್ಬರನ್ನೇ ತಂದು ಬೊಟಿನಲ್ಲಿ ಹಾಕಿ ರಕ್ಷಿಸುವಲ್ಲಿ ಕೂಡಾ ಸುರೇಶ ಖಾರ್ವಿ ಪಾತ್ರ ಬಹು ಮಹತ್ವದ್ದು.

ಕಳೆದ ವರ್ಷ ಮಾವಿನಕುರ್ವೆ ಬಂದರದಿಂದ ಮೀನುಗಾರಿಕೆಗೆ ತೆರಳಿ ದೋಣಿ ಮಗುಚಿ ನಿರಂತರ ಒಂಭತ್ತು ಗಂಟೆಗಳ ಕಾಲ ಸಾವಿನೊಡನೆ ಸೆಣಸಾಡುತ್ತಿರುವವರನ್ನು ಸಮಯ ಪ್ರಜ್ಞೆ ಮೆರೆದು ಬದುಕಿಸಿದ ಕೀರ್ತಿಗೆ ಪಾತ್ರರಾದವರಲ್ಲಿ ಇವರೂ ಕೂಡಾ ಒಬ್ಬರು. ಭಟ್ಕಳ ಬಂದರದಿಂದ ದೋಣಿಯೊಂದರಲ್ಲಿ ಮೀನುಗಾರಿಕೆಗೆ ತೆರಳಿದ್ದ 8 ಜನರು ರಾತ್ರಿಯಾದರೂ ಬಂದರಕ್ಕೆ ಮರಳಿಲ್ಲವಾಗಿತ್ತು. ಇದನ್ನು ಮನಗಂಡು ಗೋಪಾಲ ಮೊಗೇರ ಅವರ ಮತ್ಸ್ಯದೀಪ ಬೋಟಿನಲ್ಲಿ ಸಮುದ್ರಕ್ಕೆ ತೆರಳಿದ್ದವರಲ್ಲಿ ಅತ್ಯಂತ ಚಾಣಾಕ್ಷ ತನದಿಂದ ಸಮುದ್ರದಲ್ಲಿದ್ದವರನ್ನ ಪತ್ತೆ ಹಚ್ಚುವಲ್ಲಿ ಹಾಗೂ ರೋಪ್ ಸಹಾಯದಿಂದ ನೀರಿಗಿಳಿದು ಒಬ್ಬೊಬ್ಬರನ್ನೇ ಎತ್ತಿಕೊಂಡು ಬೋಟಿಗೆ ಹಾಕುವಲ್ಲಿ ಇವರ ಕಾರ್ಯ ಪ್ರಶಂಸನೀಯವಾದದ್ದು. ಸಮುದ್ರದಲ್ಲಿ ಹುಡುಕಿ ಹುಡುಕಿ ಸುಸ್ತಾದರೂ ಕೂಡಾ ಇವರು ಮಾತ್ರ ಇನ್ನೂ ನಿರೀಕ್ಷೆಯಲ್ಲಿಯೇ ಇದ್ದರು, ಎಲ್ಲೋ ಸಮುದ್ರದ ಅಲೆಗಳು, ಗಾಳಿಯ ನಡುವೆ ಒಂದು ಕೀರಲು ಧ್ವನಿ ಕೇಳುತ್ತದೆ. ಅದನೇ ಅಧಾರವಾಗಿಟ್ಟುಕೊಂಡು ಬೆನ್ನು ಹತ್ತಿದ ಇವರಿಗೆ ಸಿಕ್ಕಿದ್ದು ಈಜಿ ಈಜಿ ಸುಸ್ತಾಗಿ ಇನ್ನೇನು ಬದುಕುವ ಆಸೆಯನ್ನೇ ತೊರೆದಿದ್ದ 7 ಜನರು. ಅವರ ಸುಳಿವು ದೊರೆಯುತ್ತಲೇ ಜೀವದ ಹಂಗು ತೊರೆದು ನೀರಿಗೆ ಧುಮುಕಿದ ಇವರು ಇನ್ನೇನು ಮುಳುಗುವ ಹಂತದಲ್ಲಿದ್ದ ಒಂದಿಬ್ಬರನ್ನು ಅತ್ಯಂತ ಚಾಣಾಕ್ಷತನದಿಂದ ಮೇಲಕ್ಕೆ ತಂದು ಪ್ರಾಣ ಉಳಿಸಿದ ಕೀರ್ತಿ ವರಿಗೆ ಸಲ್ಲುತ್ತದೆ. ನೀರಿನಲ್ಲಿ ಸದಾ ಸಾಹಸ ಮಾಡುವವರಾದರೂ ಕೂಡಾ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಧೈರ್ಯ ತೋರುವವರು ಬಹಳ ವಿರಳ. ತಮ್ಮ ಕುಟುಂಬದ ನೆನಪು ಮಾಡಕೊಂಡು ಕೇವಲ ರೋಪ್ ಇಲ್ಲವೇ ಜೀವರಕ್ಷಕ ವಸ್ತುಗಳನ್ನು ನೀಡಿ ಮೇಲೆತ್ತಲು ನೋಡುತ್ತಾರೆಯೇ ವಿನಹ ಇವರಂತೆ ತಕ್ಷಣ ನೀರಿಗೆ ಧುಮುಕುವವರು ಅತ್ಯಂತ ವಿರಳ.

ಇಲ್ಲಿನ ತನಕ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಳ್ಳುತ್ತಿದ್ದ 11 ಜನರನ್ನು ರಕ್ಷಣೆ ಮಾಡಿದ ಇವರಿಗೆ ತೃಪ್ತಿ ಇದೆ. ಹೆಂಡತಿ ಎರಡು ಮಕ್ಕಳೊಂದಿಗೆ ಸಂಸಾರ ಮಾಡುತ್ತಿರುವ ಇವರು ಜೀವದ ಹಂಗು ತೊರೆದು ನೀರಿಗೆ ಧುಮುಕುವಾಗ ತಮ್ಮ ಹೆಂಡತಿ ಮಕ್ಕಳನ್ನೂ ನೆನೆಸುತ್ತಾರೆ. ಆದರೆ ದೇವರ ನಾಮ ಸ್ಮರಣೆಯಿಂದ ಎಲ್ಲವೂ ಸಾಧ್ಯವಾಗಿದೆ ಎನ್ನುವುದಕ್ಕೆ ಮರೆಯುವುದಿಲ್ಲ. ಒಮ್ಮೆ ಇನ್ನೇನು ನೀರಿನಿಲ್ಲಿ ಮುಳುಗಿದ ಸಹೋದ್ಯೋಗಿ ರಕ್ಷಣೆ ಮಾಡುವಾಗ ಅಕ್ಷರಸ ತಾವೇ ಅಪಾಯದಲ್ಲಿ ಸಿಲುಕುತ್ತಾರೆ. ಆದರೂ ಸಹ ಧೈರ್ಯ ಮಾಡಿಕೊಂಡು ಸಾಹಸದಿಂದ ಮೇಲೆದ್ದು ಬಂದಿದ್ದಲ್ಲದೇ ತಮ್ಮ ಸಹೋದ್ಯೋಗಿಯನ್ನೂ ರಕ್ಷಿಸಿದ ಕೀರ್ತಿ ಇವರಿಗೆ ಸಲ್ಲಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X