ಇಂದಿನ ಯುವ ಪೀಳಿಗೆ ಪುಸ್ತಕ ಬಿಟ್ಟು ಮಸ್ತಕ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ: ಅಡ್ಡಂಡ.ಸಿ.ಕಾರ್ಯಪ್ಪ

ವಿರಾಜಪೇಟೆ, ಆ.29: ವಿದ್ಯಾರ್ಥಿಗಳು ವಿಪರಿತ ಮೊಬೈಲ್ ಬಳಕೆಯಿಂದ ಮಾನಸಿಕ ರೋಗಿಗಳ ರೀತಿಯಲ್ಲಿ ಬದಲಾಗುತ್ತಿರುವುದು ದೇಶಕ್ಕೆ ಅಪಾಯ ಎಂದು ಖ್ಯಾತ ಬರಹಗಾರ, ರಂಗಕರ್ಮಿ ಅಡ್ಡಂಡ.ಸಿ.ಕಾರ್ಯಪ್ಪ ಕಳವಳ ವ್ಯಕ್ತಪಡಿಸಿದರು.
ವಿರಾಜಪೇಟೆ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಉದ್ಘಾಟನೆಗೊಂಡ ವಿದ್ಯಾರ್ಥಿ ಸಂಘ ಮತ್ತು ಸಹಪಠ್ಯ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ಯುವ ಪೀಳಿಗೆ ಪುಸ್ತಕ ಬಿಟ್ಟು ಮಸ್ತಕ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ವಿದ್ಯಾರ್ಥಿ ಸಂಘಟನೆಗಳು ಸ್ವಾತಂತ್ರ್ಯ ಹೋರಾಟದಲ್ಲಿ ದುಮಿಕಿದ್ದವು. ಆದರೆ ಇಂದಿನ ವಿದ್ಯಾರ್ಥಿಗಳ ಆಲೋಚನೆ ಓದುವುದು ಹಣಗಳಿಕೆಗೆ ಮಾತ್ರ, ಇದರೊಂದಿಗೆ ಪೋಷಕರು ಒತ್ತಾಡವು ಕೂಡ ಕಂಡುಬರುತ್ತಿದೆ. ತಮ್ಮ ಮಕ್ಕಳನ್ನು ಮುದ್ದು ಮಾಡಿ ಸಂಸ್ಕಾರ ಕಲಿಸದೆ, ಭವಿಷ್ಯತ್ತಿನ ಹಾದಿಯನ್ನೆ ಮರೆಮಾಚ್ಚುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಉದ್ಘಾಟಿಸಿದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹಾಕಿ ತೀರ್ಪುಗಾರ್ತಿ ಅನೂಪಮ ಮಂದಣ್ಣ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲೇ ತಮ್ಮದೆಯಾದ ಉದ್ದೇಶ ಮತ್ತು ಗುರಿಯನ್ನು ಹೊಂದಿರಬೇಕು. ಮಾನಸಿಕವಾಗಿ ಮತ್ತು ದೈಹಿಕವಾಗಿ ದೃಢತೆ ಸಾಧಿಸಿದಾಗ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಕೆ.ಬೋಪಯ್ಯರವರು ಮಾತನಾಡಿ, ಸರಕಾರಿ ಕಾಲೇಜ್‍ಗಳು ಬಡವರ ವಿದ್ಯಾರ್ಥಿಗಳ ತವರೂರು. ಅದರೆ ಇಲ್ಲಿ ಕಲಿಕೆಗೆ ಬಡತನವಿಲ್ಲ. ವಿಷಯದಲ್ಲಿ ನೂರಿತ ಮತ್ತು ಸಂಶೋಧನ ಪ್ರಾಧ್ಯಾಪಕ ವರ್ಗವನ್ನು ಕಾಣಬಹುದು. ವಿದ್ಯಾರ್ಥಿಗಳು ತಮ್ಮಲ್ಲಿ ಕಲಿಕೆ ಮನಸ್ಸು ಹೊಂದಿರಬೇಕು. ಮನಸ್ಸನ್ನು ವಿಷಯಾಂತರ ಮಾಡುವ ಬದಲು ನಿಮ್ಮ ಭವಿಷ್ಯದ ಕನಸ್ಸನ್ನು ಕಂಡು ನನಸು ಮಾಡಿಕೊಳ್ಳಿ ಮತ್ತು ದೇಶದ ಉತ್ತಮ ಪ್ರಜೆಗಳಾಗಿ ಎಂದು ಕಿವಿ ಮಾತು ಹೇಳಿದರು.
ಈ ವೇಳೆ ಕಾಲೇಜಿನ ಪ್ರಾಧ್ಯಾಪಕಿ ಎಂ.ಎಂ. ಸುನೀತಾರವರು ಕಾಲೇಜಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಕಾರ್ಯಾಧ್ಯಕ್ಷ ಎಂ.ಬೋಸ್ ದೇವಯ್ಯನವರು, ಅತಿಥಿ ಉಪನ್ಯಾಸಕ ಸತೀಶ್ ಮಾಡಿದರು. ರಂಗಕರ್ಮಿ ಅನಿತಾ ಕಾರ್ಯಪ್ಪ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಗಂಗಾವತಿ ಮತ್ತು ಕಾವೇರಮ್ಮ ನಿರೂಪಿಸಿದರು.







