ಸುನ್ನಿ ಮುಸ್ಲಿಂ ಕ್ರಿಯಾ ಸಮಿತಿಯಿಂದ ಬಕ್ರೀದ್ ಕಿಟ್ ವಿತರಣೆ
ಮಂಗಳೂರು, ಆ.29: ದ.ಕ.ಜಿಲ್ಲಾ ಸುನ್ನಿ ಮುಸ್ಲಿಂ ಕ್ರಿಯಾ ಸಮಿತಿ ವತಿಯಿಂದ ಇತ್ತೀಚೆಗೆ ಬಕ್ರೀದ್ ಕಿಟ್ ಹಾಗು ಮಹಿಳೆಯರ ನಮಾಝ್ ವಸ್ತ್ರ ‘ಜುಬ್ಬ-ಮಕ್ಕನೆ’ಯನ್ನು ಕೂಡ ವಿತರಿಸಲಾಯಿತು.
ದ.ಕ.ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಮಸೂದ್ ಮಾತನಾಡಿ ತ್ಯಾಗ ಬಲಿದಾನದ ಹಬ್ಬವಾದ ಬಕ್ರೀದ್ ನಾಡಿಗೆ ಒಲಿತನ್ನು ತರಲಿ ಎಂದು ಹಾರೈಸಿದರು.
ಸಮಿತಿಯ ಅಧ್ಯಕ್ಷ ಸಿ. ಅಹ್ಮದ್ ಜಮಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಬಶೀರ್ ಉಳ್ಳಾಲ್, ಎಂ.ಕೆ.ಅಶ್ರಫ್, ಹಾಜಿ ಎಂ. ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು. ಮುಹಮ್ಮದ್ ಇಸ್ಮಾಯೀಲ್ ಸ್ವಾಗತಿಸಿ, ವಂದಿಸಿದರು.
Next Story





