ಹಳಿ ತಪ್ಪಿದ ತುರಂತೊ ಎಕ್ಸ್‌ಪ್ರೆಸ್
ಮುಂಬೈ: ನಾಗಪುರ-ಮುಂಬೈ ತುರಂತೊ ಎಕ್ಸ್‌ಪ್ರೆಸ್‌ನ ಕನಿಷ್ಠ 7 ಬೋಗಿ ಹಾಗೂ ಇಂಜಿನ್ ಟಿಟ್ವಾಲಾ ಸಮೀಪದ ವಾಸಿಂದ್ ಹಾಗೂ ಅಸನ್‌ಗಾಂವ್ ನಡುವೆ ಮಂಗಳವಾರ ಬೆಳಗ್ಗೆ ಹಳಿ ತಪ್ಪಿದೆ. ಕಲ್ಯಾಣದಿಂದ ರಕ್ಷಣಾ ಕಾರ್ಯಕರ್ತರ ತಂಡ ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ. ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಆದರೆ, ಯಾರಿಗೂ ಗಂಭೀರ ಗಾಯಗಳಾಗಿಲ್ಲ.
Next Story





