ಹಾಲು ಉತ್ಪಾದಕರು ಹಾಲಿನ ಗುಣ ಮಟ್ಟವನ್ನು ಕಾಪಾಡಬೇಕು: ನಾಗರಾಜು
ಹನೂರು, ಆ.30: ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಸಹಕಾರ ಸಂಘಕ್ಕೆ ನೀಡಬೇಕು ಹಾಗೂ ರಾಸುವಿಗೆ ಸಮತೋಲನ ಆಹಾರ ನೀಡಿ ಮತ್ತು ಹಾಲಿನಲ್ಲಿ ಕೊಬ್ಬಿನ ಅಂಶ ಇರುವಂತೆ ಹಾಲಿನ ಗುಣಮಟ್ಟ ಕಾಪಾಡಬೇಕು ಎಂದು ಹಾಲು ಉತ್ಪಾದಕರಲ್ಲಿ ಚಾಮುಲ್‍ನ ಸಹಾಯಕ ವ್ಯವಸ್ಥಾಪಕ ಎಸ್ ನಾಗರಾಜು ಮನವಿ ಮಾಡಿದರು.
ಕ್ಷೇತ್ರ ವ್ಯಾಪ್ತಿಯ ಪಚ್ಚೆ ಗೌಡ ನದೂಡ್ಡಿಯ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಹಾಲಿನ ಗುಣಮಟ್ಟ ಕುಸಿದರೆ ಸರಕಾರ ನೀಡುವ 5 ರೂ ಪ್ರೂತ್ಸಾಹಧನವು ಕಡಿತಗೂಳ್ಳುತ್ತದೆ ಆದ್ದರಿಂದ 8.5 ಎಸ್‍ಎನ್‍ಎಪ್ ಬರುವಂತೆ ಹಾಲು ಪೂರೈಕೆ ಮಾಡಲು ಸದ್ಯಸರು ಸಹಕರಿಸಬೇಕು ಎಂದು ತಿಳಿಸಿದರು.
ಈ ಸಹಕಾರ ಸಂಘವು ದಿನಕ್ಕೆ 350ಲೀ ಹಾಲು ಉತ್ಪಾದನೆ ಮಾಡುತ್ತಿದ್ದು, ಹಾಲಿನ ಗುಣಮಟ್ಟ ಕಾಪಾಡುವಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಿ ಮತ್ತು ಇರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕೇಂದು ಸಲಹೆ ನೀಡಿದರು.
ಅಧ್ಯಕ್ಷ ಶಿನಮೂರ್ತಿರವರು ಮಾತನಾಡಿ, ಗುಣಮಟ್ಟ ಹಾಲು ನೀಡುವ ರೈತರಿಗೆ ಸರಕಾರದಿಂದ ಪ್ರತೀ ಲೀಟರ್‍ಗೆ 25ರೂ ನಿಂದ 27ರೂ ದರ ನೀಡಲಾಗುತ್ತದೆ ಎಂದರು.
ಪಚ್ಚೆದೂಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಅರವಿಂದ ಮಾತನಾಡಿ, 2016-17 ನೇ ಸಾಲಿನ ಸಹಕಾರ ಸಂಘದ ವಾರ್ಷಿಕ ವರದಿ ಓದುತ್ತಾ, ಸಹಕಾರ ಸಂಘವು 13016.15- ರೂ ನಿವ್ವಳ ಲಾಭದಲ್ಲಿದ್ದು, ಇನ್ನು ಮುಂದೆಇನ್ನು ಹೆಚ್ಚಿನರೀತಿ ನಮ್ಮ ಸಂಘ ಲಾಭದಾಯವಾಗಿರಲಿ ಹಾಗೂ ಗುಣಮಟ್ಟಕಾಪಾಡಲಿ ಎಂದು ತಿಳಿಸಿದರು.
ಈ ಸಂದರ್ಭದಲಿ ವಿಸ್ತರಣಾಧಿಕಾರಿಯಾದ ವೆಂಕಟೇಶ್, ಪಚ್ಚೆ ದೂಡ್ಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಸುಬ್ರಮಣಿ ಹಾಗೂ ನಿರ್ದೇಶಕರುಗಳು ಸಭೆಯಲ್ಲಿ ಭಾಗವಹಿಸಿದ್ದರು.







