ಚೆನ್ನೈ: ಪಾಪ್ಯುಲರ್ ಫ್ರಂಟ್‌ನ ರಕ್ಷಣಾ, ಪರಿಹಾರ ಸ್ವಯಂಸೇವಕರ ತಂಡ ಉದ್ಘಾಟನೆ
.jpg)
ಚೆನ್ನೈ, ಆ. 30: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಕ್ಷಣಾ ಮತ್ತು ಪರಿಹಾರ ಸ್ವಯಂ ಸೇವಕರ ತಂಡವನ್ನು ಆ. 27 ರಂದು ಮದ್ರಾಸ್ ವಿಶ್ವವಿದ್ಯಾನಿಲಯದ ಸೆಂಟಿನರಿ ಆಡಿಟೋರಿಯಮ್‌ನಲ್ಲಿ ಉದ್ಘಾಟಿಸಿಲಾಯಿತು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್‌ಮೆನ್ ಇ ಅಬೂಬಕರ್ ಉದ್ಘಾಟಿಸಿ ಮುಖ್ಯ ಭಾಷಣವನ್ನು ನೀಡಿದರು. ಪಾಪ್ಯುಲರ್ ಫ್ರಂಟ್‌ನ ಈ ಹೊಸ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸುತ್ತಾ ಪ್ರಾಕೃತಿಕ ವಿಕೋಪ ಅಥವಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಅನಿರೀಕ್ಷಿತ ಮತ್ತು ನಿರ್ಣಾಯಕ ಪರಿಸ್ಥಿತಿಯಲ್ಲಿ ಪಾಪ್ಯುಲರ್ ಫ್ರಂಟ್‌ನ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಮತ್ತು ತ್ವರಿತವಾಗಿ ಮತ ಬೇಧವನ್ನು ಮರೆತು ಸಮಾಜದ ಎಲ್ಲಾ ವಿಭಾಗಗಳ ಸಂತ್ರಸ್ತರಿಗೆ ಸಹಾಯ ಮಾಡಲು ಇದು ಸಹಕಾರಿಯಾಗಿದೆ. ರಕ್ಷಣಾ ಮತ್ತು ಪರಿಹಾರ ತಂಡದ ರಚನೆಯು ನಮ್ಮ ಪರಿಹಾರ ಕಾರ್ಯವನ್ನು ವೃತ್ತಿಪರಗೊಳಿಸಲು ಬಯಸುತ್ತಿದೆ. ಇನ್ನಷ್ಟು ಅನುಭವವನ್ನು ಹೊಂದಿ ಹೊಸ ಸ್ವಯಂಸೇವಕರನ್ನು ತರಬೇತಿ ಮಾಡಲು ಮತ್ತು ಸರಕಾರದಿಂದ ಸರಿಯಾದ ಮಾರ್ಗದರ್ಶನ ಸಿಕ್ಕಿದಲ್ಲಿ ನಮ್ಮ ಸ್ವಯಂಸೇವಕರು ಈ ಮಾನವೀಯ ಸೇವೆಗಳನ್ನು ಭಾರತದದ್ಯಾಂತ ವಿಸ್ತರಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪಾಪ್ಯುಲರ್ ಫ್ರಂಟ್‌ನ ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ವಿವಿಧ ರಾಜ್ಯ ಸರಕಾರಗಳು, ಅಧಿಕಾರಿಗಳು, ಸರಕಾರೇತರ ಸಂಸ್ಥೆಗಳು ಮತ್ತು ಪ್ರಮುಖ ವ್ಯಕ್ತಿಗಳಿಂದ ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ. ನಮ್ಮ ಕಾರ್ಯಕರ್ತರಿಗೆ ಸುನಾಮಿ, ಚೆನ್ನೈ ಪ್ರವಾಹ, ಅಸ್ಸಾಂ ಮತ್ತು ಬಿಹಾರ ಪ್ರವಾಹ ಮತ್ತು ಮಂಗಳೂರು ವಿಮಾನ ಅಪಘಾತ ನಡೆದ ಸಂದರ್ಭದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿ ಅನುಭವವಿದ್ದು, ಈ ಹೊಸ ತಂಡದ ರಚನೆಯು ಸರಕಾರಿ ಏಜೆನ್ಸಿಗಳು ಮತ್ತು ಇತರ ವಿಪತ್ತು ನಿರ್ವಹಣಾ ಸಂಸ್ಥೆಗಳೊಂದಿಗೆ ಸಹಕರಿಸುವ ಮೂಲಕ ನಮ್ಮ ಪರಿಹಾರ ಚಟುವಟಿಕೆಗಳ ವ್ಯಾಪ್ತಿಯನ್ನು ಹೆಚ್ಚಿಸಲು ನಮಗೆ ಅವಕಾಶವನ್ನು ನೀಡುತ್ತದೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಹಾಗೂ ಮೈಲಾಪುರ್ ಶಾಸಕರಾದ ಆರ್.ನಟರಾಜು, ಕೆಕೆಎಸ್‌ಮ್ ದೆಹ್ಲಾನ್ ಬಾಖವಿ ರಾಜ್ಯಾಧ್ಯಕ್ಷರು ಎಸ್‌ಡಿಪಿಐ, ಭಾರತಿ ತಮಿಳನ್ ಉಪ ಸಂಪಾದಕರು ದಿ ಹಿಂದು ನ್ಯೂಸ್, ಸುಂದರ್ ರಾಜನ್ ಸಂಚಾಲಕರು ಪೂ ಉಲಕಿನ್ ನನ್ಬರ್‌ಕಳ್, ಎ.ಕೆ ಹನೀಫ ಸಂಚಾಲಕರು ಮುಸ್ಲಿಂ ರಾಜಕೀಯ ಪಕ್ಷ ಮತ್ತು ಸಂಘಟನೆಗಳ ಒಕ್ಕೂಟ, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಇಂಡಿಯಾ ತಮಿಳುನಾಡು ರಾಜ್ಯಾಧ್ಯಕ್ಷ ಎಂ ಮುಹಮ್ಮದ್ ಇಸ್ಮಾಯಿಲ್ ವಹಿಸಿ ಮುಹಮ್ಮದ್ ಶೇಕ್ ಅನ್ಸಾರಿ , ಪ್ರಧಾನ ಕಾರ್ಯದರ್ಶಿ ಪಾಪ್ಯುಲರ್ ಫ್ರಂಟ್ ಇಂಡಿಯಾ ತಮಿಳುನಾಡು ಸ್ವಾಗತಿಸಿದರು.







