ಮೊನಾಲಿಸಾ ಚಿತ್ರದ ‘ನಗು’ವಿನ ಹಿಂದಿನ ರಹಸ್ಯ ಭೇದಿಸಿದ ಹೊಸ ಅಧ್ಯಯನ!

ಲಂಡನ್,ಆ.30: ಲಿಯೊನಾರ್ಡ್ ಡಾವಿಂಚಿಯ ವಿಶ್ವಪ್ರಸಿದ್ಧ ಚಿತ್ರವಾದ ಮೊನಾಲಿಸಾದ ನಿಗೂಢ ಮುಗುಳ್ನಗುವಿನಲ್ಲಿ ಗುಲಾಮ ಬದುಕಿನ ನೋವು ತುಂಬಿಕೊಂಡಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಮಾರ್ಟಿನ್ ಕೆಂಪ್, ಜುಸೆಪ್ಸ್ ಪ್ಲಾಂಟಿ ಸೇರಿ ರಚಿಸಿದ ‘ಮೊನಾಲಿಸಾ- ಜನರು ಮತ್ತು ಚಿತ್ರ’ ಎನ್ನುವ ಪುಸ್ತಕದಲ್ಲಿ ಮೊನಲಿಸಾರ ಜೀವನದ ಕುರಿತು ಪ್ರತಿಪಾದಿಸಲಾಗಿದೆ. ಲಿಸಾ ಜೆರಾರ್ಡ್‍ರನ್ನು ಡಾವಿಂಚಿಯು , ಚಿತ್ರದಲ್ಲಿ ಮಾದರಿಯಾಗಿಟ್ಟುಕೊಂಡಿದ್ದರು. 1479ರಲ್ಲಿ ಫ್ಲಾರೆನ್ಸ್‍ನಲ್ಲಿ ಲಿಸಾ ಜೆರಾರ್ಡ್ ಜನಿಸಿದ್ದರು ಎನ್ನುವುದನ್ನು ಪುಸ್ತಕಗಳಲ್ಲಿ ದಾಖಲಿಸಲಾಗಿದೆ.
30ವರ್ಷದ ಪತ್ನಿಯಿಲ್ಲದ ಗುಲಾಮ ವ್ಯಾಪಾರಿಯಾದ ಫ್ರಾನ್ಸಿಸ್ಕೊ ಡೆಲ್ ಜಿಯೊ ಕೊಂಡೊಯೊ ಹದಿನೈದನೆ ವರ್ಷಗಳಲ್ಲಿ ಜೆರಾರ್ಡ್‍ರನ್ನು ಮದುವೆಯಾಗಿದ್ದನು. ಜಿಯೊಕೊಂಡೊ ಹಲವು ಹೆಣ್ಣುಮಕ್ಕಳನ್ನು ಗುಲಾಮರನ್ನಾಗಿ ಇಟ್ಟುಕೊಂಡಿದ್ದನು.ತಂದೆ ಕ್ರೈಸ್ತರನ್ನಾಗಿ ಮಾಡಿದ ಗುಲಾಮ ಮಹಿಳೆಯರ ಜೊತೆ ಸಣ್ಣದಿಂದಲೇ ಜಿಯೊಕೊಂಡೊ ಬದುಕಿದ್ದನು. ತಂದೆಯ ನಿಧನದ ಬಳಿಕ ಗುಲಾಮರನ್ನುಖರೀದಿಸುವುದು ಜಿಯೊಕೊಂಡೊನ ಜವಾಬ್ದಾರಿಯಾಯಿತು.
ಆತ ಉತ್ತರ ಆಫ್ರಿಕದಿಂದ ಹಲವಾರು ಹೆಣ್ಣುಮಕ್ಕಳನ್ನು ಕರೆತಂದು ಮತಾಂತರ ಮಾಡಿದನು. ಹೀಗೆ ಜಿಯೊಕೊಂಡೊ ಮತಾಂತರಗೊಳಿಸಿದ ಹೆಣ್ಣುಮಕ್ಕಳ ಹೆಸರುಗಳು ಪುಸ್ತಕದಲ್ಲಿದೆ. ಡಾವಿಂಚಿಯ ತಂದೆ ವಕೀಲರಾಗಿದ್ದರು. ಜಿಯೊಕೊಂಡೊ ಅವರ ಕಕ್ಷಿಯಾಗಿದ್ದನು. ಆದರೆ, ಜೆರಾರ್ಡೊರೊಂದಿಗೆ ಡಾವಿಂಚಿ ಹೇಗೆ ಸಂಬಂಧ ಕುದುರಿಸಿದ್ದನ್ನು ಎನ್ನುವುದು ಸ್ಪಷ್ಟವಾಗಿಲ್ಲ. 1503ರಲ್ಲಿ ಮೊನಲಿಸಾ ಚಿತ್ರ ಬರೆಯಲು ಡಾವಿಂಚಿ ಆರಂಭಿಸಿದ್ದನು.







