ಪ್ರಚಾರ ಸೇವೆಗಿಂತ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು: ಗುರುರಾಜು ಹೆಬ್ಬಾರ್ ಕರೆ
.jpg)
ಹಾಸನ, ಆ.30: ಪ್ರಚಾರ ಸೇವೆಗಾಗಿಯೇ ಅನೇಕ ಸಂಘಟನೆಗಳು ಇದ್ದು, ಆದರೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವವರು ಕೆಲವೇ ಸಂಘಟನೆಗಳನ್ನು ಮಾತ್ರ ಕಾಣಬಹುದು ಎಂದು ಸಮಾಜ ಸೇವಕ ಗುರುರಾಜು ಹೆಬ್ಬಾರ್ ತಿಳಿಸಿದರು.
ನಗರದ ಅರಳೇಪೇಟೆ ರಸ್ತೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ ಕರ್ನಾಟಕ ರಾಜ್ಯ ಮಾನವ ಹಕ್ಕುಗಳು ಮತ್ತು ಪತ್ರಕರ್ತರ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆ ಎಂಬುದು ಸಮಾಜದ ಒಳಿತೆಗೆ ಕೆಲಸ ಮಾಡಬೇಕು. ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು. ಸಂಘಟನೆಯು ಉತ್ತಮ ಕೆಲಸ ಮಾಡಿದರೇ ಮಾತ್ರ ದೀರ್ಘ ಕಾಲ ಇರುತ್ತದೆ. ಒಳ್ಳೆ ಕೆಲಸ ಮಾಡಲಿ ಎಂದು ಇದೆ ವೇಳೆ ಶುಭ ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ರವಿನಾಕಲಗೂಡು ಮಾತನಾಡಿ, ಸಂಘಟನೆ ಹೆಸರಲ್ಲಿ ಸಮಾಜ ವಿರೋಧಿ ಚಟುವಟಿಕೆ ಕೆಲಸಕ್ಕೆ ಮುಂದಾಗುತ್ತಾರೆ. ಆದರೇ ಉತ್ತಮ ಕೆಲಸ ಮಾಡುವ ಸಂಘಟನೆಗಳಿಗೆ ಇಂತವರಿಂದ ಅಪವಾದ ಬರುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು.
ಒಂದು ಸಂಘಟನೆಯ ಉತ್ತಮ ಕೆಲಸವನ್ನು ಪ್ರೋತ್ಸಹಿಸಬೇಕೆ ವರತು ಕಾಲೇಳೆಯುವ ಕೆಲಸ ಸಂಘಟನೆಯದು ಆಗಬಾರದು. ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗದಿದ್ದರೂ ಸಮಾಜ ಘಾತಕ ಕೆಲಸಕ್ಕೆ ಕೈಹಾಕಬಾರದು ಎಂದು ಸಂಘಟನೆಯ ಪದಾಧಿಕಾರಿಗಳಿಗೆ ತಿಳಿ ಮಾತು ಹೇಳಿದರು.
ಸಮಾಜ ಸೇವಕ ಮಹಾಂತಪ್ಪ ಮಾತನಾಡಿ, ಯಾರ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾಗುತ್ತಾರೆ ಅಂತವರ ವಿರುದ್ಧ ಧ್ವನಿ ಎತ್ತುವ ಕೆಲಸ ಆಗಬೇಕು. ಜೊತೆಗೆ ಪತ್ರಕರ್ತರ ಸಮಿತಿ ಇರುವುದು ಉತ್ತಮವಾಗಿದೆ. ಒಳ್ಳೆ ಕೆಲಸದ ಹೋರಾಟಕ್ಕೆ ನಮ್ಮ ಸಹಕಾರ ಇದ್ದೆ ಇರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳು ಹಾಗೂ ಪತ್ರಕರ್ತರ ಸಮಿತಿ ರಾಜ್ಯಾಧ್ಯಕ್ಷ ಸಿ. ಸಂತೋಷ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅಶ್ವಿನಿ, ಪತ್ರಕರ್ತರ ಸಂಘದ ನಗರಾಧ್ಯಕ್ಷ ಎ.ಬಿ. ಮುರುಳಿ, ಜಿಲ್ಲಾಧ್ಯಕ್ಷ ಜಿ.ಎನ್. ಮೂರ್ತಿ, ತಾಲೂಕು ಅಧ್ಯಕ್ಷ ಮಾಂಥಪ್ಪ, ಉಪೇಂದ್ರ ಸಂಘದ ಅಧ್ಯಕ್ಷ ಹರೀಶ್‍ಗೌಡ, ಚಿತ್ರನಟ ರಘುರಾಜು, ರಾಜ್ಯ ಉಪಾಧ್ಯಕ್ಷ ಮೋಹನ್ ಕುಮಾರ್, ಜಿಲ್ಲಾ ಸಂಘಟನೆಯ ವೆಂಕಟೇಶ್ ಪದಾಧಿಕಾರಿಗಳಾದ ಶಿವರತ್ನ, ಅವಿನಾಶ್, ಪುರುಷೋತ್ತಮ್, ಸುಧರ್ಶನ್, ಸಮಂತ್ ಕುಮಾರ್, ಲೋಕೇಶ್, ಶ್ರೀಧರ್, ಭರತ್, ಬಾಲಸುಬ್ರಮಣ್ಯ, ಆದರ್ಶ, ಸಂತೋಷ್, ಅಭಿಷೇಕ್‍ಗೌಡ, ಅಖಿಲೇಶ್, ಚಂದನ್, ಅರುಣ್ ಕುಮಾರ್, ಜಗದೀಶ್, ನಿಶಾ, ವೀಣಾ, ಮಹೇಶ್ ಇತರರು ಪಾಲ್ಗೊಂಡಿದ್ದರು.







