ವೃದ್ಧೆ ನಾಪತ್ತೆ

ಉಡುಪಿ, ಆ.30: ಹೆರ್ಗ ಗ್ರಾಮದ ಸರಳೇಬೆಟ್ಟು ಮನೆಯ ಮೊಳ್ಮ ನಾಯಕ್ ಎಂಬವರ ಪತ್ನಿ ಸುಮಾರು 65 ವರ್ಷ ಪ್ರಾಯದ ಲಕ್ಷ್ಮೀ ನಾಯ್ಕ ಅವರು ಆ.27ರಂದು ಬೆಳಗ್ಗೆ ಯಿಂದ ನಾಪತ್ತೆಯಾಗಿದ್ದು, ಈವರೆಗೆ ಪತ್ತೆಯಾಗಿಲ್ಲ.
4 ಅಡಿ 8 ಇಂಚು ಎತ್ತರ, ಗೋಧಿ ಮೈಬಣ್ಣ ಹೊಂದಿರುವ, ಕಂದು ಬಣ್ಣದ ಕಾಟನ್ ಸೀರೆ ಹಾಗೂ ಬಿಳಿಬಣ್ಣದ ರವಕೆ, ಬೆಳ್ಳಿಯ ಕರಿಮಣಿ ಹಾಗೂ ಬೆಳ್ಳಿಯ ಕಾಲುಂಗುರ ಧರಿಸಿರುವ ಇವರು ಕನ್ನಡ, ತುಳು, ಮರಾಠಿ ಭಾಷೆಯನ್ನು ಬಲ್ಲರು. ಕೆನ್ನೆಯಲ್ಲಿ ಚಿಕ್ಕ ಕಪ್ಪು ಮಚ್ಚೆ ಹೊಂದಿರುವ ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆ (ದೂರವಾಣಿ:0820-2570328) , ಮಣಿಪಾಲ ನಿರೀಕ್ಷಕಕರ ಠಾಣೆ (9480805448) ಅಥವಾ ಪೊಲೀಸ್ ಉಪ ನಿರೀಕ್ಷಕರು ಮಣಿಪಾಲ (9480805475) ಇವರನ್ನು ಸಂಪರ್ಕಿಸುವಂತೆ ಪೊಲೀಸರ ಪ್ರಕಟಣೆ ತಿಳಿಸಿದೆ.
Next Story





