Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನೋಟು ಅಮಾನ್ಯ:ನಿಷೇಧಿತ 500,1000 ರೂ....

ನೋಟು ಅಮಾನ್ಯ:ನಿಷೇಧಿತ 500,1000 ರೂ. ನೋಟುಗಳ ಪೈಕಿ ಹೆಚ್ಚಿನವು ವಾಪಸ್; ಆರ್‌ಬಿಐ

ವಾರ್ತಾಭಾರತಿವಾರ್ತಾಭಾರತಿ30 Aug 2017 8:31 PM IST
share
ನೋಟು ಅಮಾನ್ಯ:ನಿಷೇಧಿತ 500,1000 ರೂ. ನೋಟುಗಳ ಪೈಕಿ ಹೆಚ್ಚಿನವು ವಾಪಸ್; ಆರ್‌ಬಿಐ

ಮುಂಬೈ,ಆ.30: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷದ ನ.8ರಂದು ದಿಢೀರ್ ಘೋಷಿಸಿದ್ದ 500 ಮತ್ತು 1000 ರೂ.ನೋಟುಗಳ ಅಮಾನ್ಯಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಆರ್‌ಬಿಐ ಬುಧವಾರ ಬಿಡುಗಡೆಗೊಳಿಸಿದ ತನ್ನ ವಾರ್ಷಿಕ ವರದಿಯಲ್ಲಿ ಬಹಿರಂಗಗೊಳಿಸಿದೆ. ನಿಷೇಧಕ್ಕೆ ಮುನ್ನ ಚಲಾವಣೆಯಲ್ಲಿದ್ದ 15.44 ಲಕ್ಷ ಕೋಟಿ ರೂ. ಮೌಲ್ಯದ 500 ಮತ್ತು 1000 ರೂ.ನೋಟುಗಳ ಪೈಕಿ 15.28 ಲಕ್ಷ ಕೋಟಿ ರೂ.ಮೌಲ್ಯದ ನೋಟುಗಳನ್ನು ಜನರು ಬ್ಯಾಂಕ್‌ಗಳಿಗೆ ಮರಳಿಸಿದ್ದಾರೆ. ಕೇವಲ 16,000 ಕೋ.ರೂ.ಮೌಲ್ಯದ ನೋಟುಗಳು ವಾಪಸಾಗಿಲ್ಲ!

ನ.8ಕ್ಕೆ ಮುನ್ನ ದೇಶಾದ್ಯಂತ 1000 ರೂ.ಮುಖಬೆಲೆಯ 632.6 ಕೋ.ನೋಟುಗಳು ಚಲಾವಣೆಯಲ್ಲಿದ್ದವು, ಈ ಪೈಕಿ 8.9 ಕೋ.ನೋಟುಗಳು ಮಾತ್ರ ಬ್ಯಾಂಕ್‌ಗಳಿಗೆ ವಾಪಸಾಗಿಲ್ಲ ಎಂದು ಆರ್‌ಬಿಐ 2017-17ನೇ ಸಾಲಿನ ತನ್ನ ವರದಿಯಲ್ಲಿ ತಿಳಿಸಿದೆ.

ಸರಕಾರವು ಕಪ್ಪುಹಣವನ್ನು ನಿರ್ಮೂಲಿಸುವ ಉದ್ದೇಶದಿಂದ ನ.8 ಮಧ್ಯರಾತ್ರಿಯಿಂದ 500 ಮತ್ತು 1000 ರೂ.ಗಳ ನೋಟುಗಳನ್ನು ರದ್ದುಗೊಳಿಸಿತ್ತು. ರದ್ದಾದ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ಅವಕಾಶ ನೀಡಲಾಗಿತ್ತು.

ರದ್ದಾದ 500 ರೂ.ನೋಟುಗಳ ಬದಲಿಗೆ ಸರಕಾರವು ಹೊಸ 500 ರೂ. ನೋಟುಗಳನ್ನು ಚಲಾವಣೆಗೆ ತಂದಿದೆ. 1000 ರೂ.ಗಳ ಬದಲಿಗೆ 2000 ರೂ.ಗಳ ನೋಟುಗಳು ಈಗ ಜನರ ಕೈಗಳಲ್ಲಿ ಹರಿದಾಡುತ್ತಿವೆ.

ಹೊಸ ಕರೆನ್ಸಿ ನೋಟುಗಳ ಮುದ್ರಣದಿಂದಾಗಿ ಹಿಂದಿನ ವರ್ಷ 3,421 ಕೋ.ರೂ. ಗಳಿದ್ದ ನೋಟು ಮುದ್ರಣ ವೆಚ್ಚವು ವರದಿ ವರ್ಷದಲ್ಲಿ ಇಮ್ಮಡಿಗೊಂಡು 7,965 ಕೋ.ರೂ.ಗಳಾಗಿದೆ ಎಂದು ವರದಿಯು ತಿಳಿಸಿದೆ. ಹೊಸ 500 ಮತ್ತು 2000 ರೂ.ನೋಟುಗಳ ಜೊತೆಗೆ 200 ರೂ.ಮುಖಬೆಲೆಯ ಹೊಸನೋಟುಗಳನ್ನೂ ಆರ್‌ಬಿಐ ಮುದ್ರಿಸಿದೆ.

ದೊಡ್ಡ ಮೊತ್ತದ ಕೋಟಾ ನೋಟುಗಳು ಚಲಾವಣೆಯಲ್ಲಿವೆ. ಇವು ನೋಟು ರದ್ಧತಿಯಿಂದಾಗ ಬೆಳಕಿಗೆ ಬರುತ್ತವೆ ಎಂದು ಹೇಳಲಾಗಿತ್ತು. ಆದರೆ ಚಲಾವಣೆಯಲ್ಲಿದ್ದ 99% ನೋಟುಗಳು ಮತ್ತೆ ಬ್ಯಾಂಕ್ ಸೇರಿವೆ. ಹಾಗಾದರೆ ಆ ಕೋಟಾ ನೋಟುಗಳು ಎಲ್ಲಿ ಹೋದವು ?


ಆಗಸ್ಟ್ 30 ರಂದು ಬಿಡುಗಡೆಯಾಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಾರ್ಷಿಕ ವರದಿಯ ಪ್ರಕಾರ :

ನೋಟು ರದ್ದತಿಯಲ್ಲಿ ಅಮಾನ್ಯವಾದ 500, 1000 ರೂ. ನೋಟುಗಳ ಒಟ್ಟು ಮೌಲ್ಯ  - ರೂ.15.44 ಲಕ್ಷ ಕೋಟಿ

ಬ್ಯಾಂಕಿಗೆ ಮರಳಿದ ಅಮಾನ್ಯಗೊಂಡ ನೋಟುಗಳ ಮೌಲ್ಯ -  ರೂ. 15.28 ಲಕ್ಷ ಕೋಟಿ 

ಹಾಗಾದರೆ ಬ್ಯಾಂಕಿಗೆ ಬಾರದ ಕಪ್ಪು ಹಣ - ಕೇವಲ ರೂ. 16 ಸಾವಿರ ಕೋಟಿ

ಹೊಸ ನೋಟುಗಳ ಮುದ್ರಣಕ್ಕೆ ಖರ್ಚಾದ ಹಣ - ರೂ. 8 ಸಾವಿರ ಕೋಟಿ 
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X