ಕಾಮನ್‌ವೆಲ್ತ್ ಪ್ರಬಂಧ ಸ್ಪರ್ಧೆ: ದಿಲ್ಲಿ ವಿದ್ಯಾರ್ಥಿನಿಗೆ ಪ್ರಶಸ್ತಿ

ಲಂಡನ್, ಆ. 30: ದಿಲ್ಲಿಯ ಸ್ಪ್ರಿಂಗ್‌ಡೇಲ್ಸ್ ಸ್ಕೂಲ್ ವಿದ್ಯಾರ್ಥಿಯಾಗಿರುವ ಹೀಯಾ ಚೌಧುರಿ, ಕ್ವೀನ್ಸ್ ಕಾಮನ್‌ವೆಲ್ತ್ ಪ್ರಬಂಧ ಸ್ಪರ್ಧೆಯಲ್ಲಿ ಸೀನಿಯರ್ ರನ್ನರ್-ಅಪ್ ಆಗಿ ಆಯ್ಕೆಯಾಗಿದ್ದಾರೆ.
ಅವರು ಭಾರತದ ವಿಭಜನೆ ವಿಷಯದಲ್ಲಿ ಬರೆದ ಸಣ್ಣ ಕತೆಯೊಂದನ್ನು ಸ್ಪರ್ಧೆಗೆ ಕಳುಹಿಸಿದ್ದರು.
30ಕ್ಕೂ ಅಧಿಕ ದೇಶಗಳ ಸಾವಿರಾರು ಸ್ಪರ್ಧಿಗಳು ಭಾಗವಹಿಸಿದ ಸ್ಪರ್ಧೆಯಲ್ಲಿ ಚೌಧುರಿಯ ಕತೆ ‘ದ ಸ್ಮಾಲೆಸ್ಟ್ ಆಫ್ ತಿಂಗ್ಸ್’ ಆಯ್ಕೆಯಾಗಿದೆ ಎಂದು ರಾಯಲ್ ಕಾಮನ್‌ವೆಲ್ತ್ ಸೊಸೈಟಿ ಹೇಳಿದೆ.
Next Story





