‘ಜನಪ್ರತಿನಿಧಿಗಳಿಗೆ ಮಾರ್ಗದರ್ಶಕರಾಗಿದ್ದ ಮಂಜುನಾಥ ಉದ್ಯಾವರ’
ಉದ್ಯಾವರ, ಆ.30: ದಿ. ಮಂಜುನಾಥ ಉದ್ಯಾವರ ಅವರು ತಾನೂ ಸೇರಿದಂತೆ ನನ್ನ ತಲೆಮಾರಿನ ಎಷ್ಟೋ ಮಂದಿ ಜನಪ್ರತಿನಿಧಿಗಳಿಗೆ ಮಾರ್ಗದರ್ಶರಾಗಿ ಇದ್ದವರು ಎಂದು ಮಾಜಿ ಸಚಿವ ಹಾಗೂ ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಉದ್ಯಾವರದ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಶ್ರೀವಿಠೋಬ ರುಖುಮಾಯಿ ನಾರಾಯಣಗುರು ಮಂದಿರದಲ್ಲಿ ಜರಗಿದ 5ನೇ ವರ್ಷದ ಮಂಜುನಾಥ ಉದ್ಯಾವರ ಸಂಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಆಸ್ಕರ್ ಫೆರ್ನಾಂಡಿಸ್‌ರ ಆಪ್ತ ಕಾರ್ಯದರ್ಶಿಯಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ ಮಂಜಣ್ಣ, ಅವರಿಗೆ ಶೋಭೆ ತರುವ ಕೆಲಸವನ್ನು ಮಾಡಿದ್ದಾರೆ. ಇದರೊಂದಿಗೆ ಅವರು ಪ್ರತಿನಿಧಿಸುವ ಪಕ್ಷಕ್ಕೆ ಬದ್ದರಾಗಿದ್ದರು. ಮಂಜುನಾಥ ಉದ್ಯಾವರ್ ಜನತೆಗೆ ಮಾಡಿದ ಮಾನವೀಯ ಸೇವೆಯಿಂದಾಗಿ ಇಂದಿಗೂ ಕೂಡಾ ಪ್ರಸ್ತುತರಾಗಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಿವೃತ್ತ ಅರಣ್ಯ ರಕ್ಷಣಾಧಿಕಾರಿ, ಬೆಂಗಳೂರು ಸಾಲುಮರದ ತಿಮ್ಮಕ್ಕ ಇಂಟರ್‌ನ್ಯಾಷನಲ್ ಫೌಂಡೇಶನ್‌ನ ಗೌರವ ವಿಶ್ವಸ್ಥ ಎ.ಎಂ. ಯೋಗೇಶ್ವರ, ಸರ್ವ ಧರ್ಮವನ್ನು ಪ್ರೀತಿಸುತ್ತಿದ್ದ ಉದ್ಯಾವರ್, ಎಲ್ಲರನ್ನು ಪ್ರೀತಿಸು ಎನ್ನುವ ಸಿದ್ದಾಂತಕ್ಕೆ ಬದ್ಧರಾ ಗಿದ್ದರು. ರಾಜಕೀಯವಾಗಿ ಉನ್ನತ ಹುದ್ದೆಯಲ್ಲಿದ್ದರೂ ಅದನ್ನು ತನ್ನ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳದೆ ಸಮಾಜಕ್ಕಾಗಿ ಉಪಯೋಗಿಸಿಕೊಂಡ ಅಪರೂಪದ ನಡೆ ಅವರದ್ದು ಎಂದರು.
ಕರ್ನಾಟಕ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಗಿರೀಶ್ ಕುಮಾರ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಯು.ಆರ್. ಚಂದ್ರಶೇಖರ್ ಸ್ವಾಗತಿಸಿದರು. ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ತಿಲಕ್‌ರಾಜ್ ಸಾಲ್ಯಾನ್ ವಂದಿಸಿ, ಆಬಿದ್ ಆಲಿ ಕಾರ್ಯಕ್ರಮ ನಿರ್ವಹಿಸಿದರು.
ಸಂಸ್ಥೆಯ ಅ್ಯಕ್ಷಯು.ಆರ್.ಚಂದ್ರಶೇಖರ್‌ಸ್ವಾಗತಿಸಿದರು.ನಿರ್ದೇಶಕಉದ್ಯಾವರನಾಗೇಶ್‌ಕುಮಾರ್‌ಪ್ರಾಸ್ತಾವಿಕವಾಗಿಮಾತನಾಡಿದರು.ಪ್ರಾನ ಕಾರ್ಯದರ್ಶಿ ತಿಲಕ್‌ರಾಜ್ ಸಾಲ್ಯಾನ್ ವಂದಿಸಿ, ಆಬಿದ್ ಆಲಿ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರದ ಕಲಾವಿದರಿಂದ ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ‘ನಳ ಕಾರ್ಕೋಟಕ’ ನೃತ್ಯ ನಾಟಕ ಜರಗಿತು







