ಭ್ರಷ್ಟಾಚಾರ: ಗ್ರಾಮ ಲೆಕ್ಕಾಧಿಕಾರಿ ಬಂಧನ

ಶಿಕಾರಿಪುರ, ಆ.30: ರೇಷನ್ ಕಾರ್ಡಗಾಗಿ ವ್ಯಕ್ತಿಯೋರ್ವರಿಂದ ಲಂಚದ ಹಣ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಯನ್ನು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ತಾಲೂಕಿನ ಅಂಬಾರಗೊಪ್ಪ ಗ್ರಾಮದ ಗ್ರಾಮಲೆಕ್ಕಾಧಿಕಾರಿ ರಮೇಶ್ ಬಂಧಿತ ಅಧಿಕಾರಿಯಾಗಿದ್ದು ಈತ ಗ್ರಾಮದ ಮಂಜಾನಾಯ್ಕ ಎಂಬುವವರಿಂದ ರೇಷನ್‌ಕಾರ್ಡಗಾಗಿ ರೂ.5 ಸಾವಿರ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಬುಧವಾರ ಈ ಸಂಬಂಧ 1 ಸಾವಿರ ಮುಂಗಡವನ್ನು ಪಟ್ಟಣದ ಮುದಿಗೌಡರ ಕೇರಿಯಲ್ಲಿ ಪಡೆಯುತ್ತಿದ್ದಾಗ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸಿಬಿ ಇನ್ಸ್‌ಪೆಕ್ಟರ್ ತಿಪ್ಪೇಸ್ವಾಮಿ,ಸಿಬ್ಬಂದಿ ಮಹೇಶ್,ಲಚ್ಚನಾಯ್ಕ,ವಸಂತ, ಯೋಗೇಶ್,ಹರೀಶ್,ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.
Next Story





