ನಿಯಮ ಉಲ್ಲಂಘನೆ:ಮನಪಾ ನೀರಿನ ಟ್ಯಾಂಕರ್ ಸಹಿತ ಹಲವು ವಾಹನಗಳು ಆರ್.ಟಿ.ಒ ವಶಕ್ಕೆ
ಮಂಗಳೂರು, ಆ.31: ಆರ್.ಟಿ.ಒ ಅಧಿಕಾರಿಗಳು ಇಂದು ಬೆಳಗ್ಗೆ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ 10ಕ್ಕೂ ಅಧಿಕ ವಾಹನಗಳನ್ನು ನಡೆಸಿ ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನೀರಿನ ಟ್ಯಾಂಕರ್ ಒಂದು ಕೂಡಾ ಸೇರಿದೆ.
ಇಂದು ಬೆಳಗ್ಗೆಯಿಂದ ನಗರದಲ್ಲಿ ಕಾರ್ಯಾಚರಣೆ ನಡೆಸಿದ ಆರ್.ಟಿ.ಒ. ಅಧಿಕಾರಿಗಳು ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ 4 ಕಾಂಟ್ರಾಕ್ಟ್ ಕ್ಯಾರೇಜ್ ಬಸ್, 8 ಆಟೋರಿಕ್ಷಾಗಳನ್ನು ವಶಕ್ಕೆ ಪಡೆದಿದ್ದಾರೆ.
Next Story