ಕಾರಜೋಳ-ಸಿ.ಟಿ.ರವಿ ಗೆ ದಲಿತ ಹೆಣ್ಣು ಮಕ್ಕಳು ಬಿಟ್ಟಿ ಸಿಕ್ಕಿದ್ದಾರೇನು: ಶಿವಾನಂದಸ್ವಾಮಿ
ಚಿಕ್ಕಮಗಳೂರು, ಆ.31: ರಾಹುಲ್ ಗಾಂಧಿ ಮದುವೆ ಮಾಡಿಸುವ ಪುರೋಹಿತ್ಯ ಕೆಲಸ ವಹಿಸಿಕೊಂಡ ಮಾಜಿ ಸಚಿವ ಗೋವಿಂದ ಕಾರಜೋಳ, ಇವರಿಗೆ ಹಿಮ್ಮೇಳ ಹೇಳಲು ಹೊರಟಿರುವ ಶಾಸಕ ಸಿ.ಟಿ. ರವಿ ಅವರಿಗೆ ದಲಿತ ಹೆಣ್ಣು ಮಕ್ಕಳು ಬಿಟ್ಟಿಸಿಕ್ಕಿದ್ದಾರೆಯೇ ಎಂದು ಜಿಲ್ಲಾ ಕಾಂಗ್ರೆಸ್‍ನ ವಕ್ತಾರ ಎಂ.ಸಿ. ಶಿವಾನಂದ ಸ್ವಾಮಿ ಟೀಕಿಸಿದ್ದಾರೆ.
ಅವರು ಗುರುವಾರ ಈ ಕುರಿತು ಹೇಳಿಕೆ ನೀಡಿದ್ದು, ಇತ್ತೀಚೆಗೆ ರಾಜಕಾರಣಿಗಳ ನಾಲಿಗೆಗೆ ಹಿಡಿತವಿಲ್ಲದಂತಾಗಿದೆ, ರಾಜ್ಯದ ದೇಶದ ಅಭಿವೃದ್ಧಿ, ಸಲಹೆ ಸೃಜನಾತ್ಮಕ ಟೀಕೆಗಳನ್ನು ಬಿಟ್ಟು ವೈಯಕ್ತಿಕ ವಿಷಯಗಳ ಬಗ್ಗೆ ಅಸಹ್ಯವಾಗಿ ಹರಿಬಿಡುತ್ತಾ ಇರುವುದು ಪ್ರಜಾಪ್ರಭುತ್ವದ ದುರಂತವಲ್ಲದೆ ಮತ್ತೇನು ಎಂದು ಪ್ರಶ್ನಿಸಿರುವ ಅವರು, ಚುನಾವಣೆ ಬಂದಾಗ ರಾಜಕಾರಣಿಗಳು ದಲಿತರ ಕೇರಿಗೆ ಹೋಗುವುದು, ಅವರ ಮನೆಗಳಲ್ಲಿ ಊಟ ಮಾಡುವುದು, ಗ್ರಾಮ ವಾಸ್ತವ್ಯ ಮಾಡುವುದು ಎಂಬ ನಾಟಕಗಳು ಜನರಿಗೆ ಗೊತ್ತಿಲ್ಲವೆಂದು ತಿಳಿದಿರುವ ಇವರು ವ್ಯಕ್ತಿಗಳ ಖಾಸಗಿತನದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ ಎಂದು ವ್ಯಂಗ್ಯವಾಡಿದ್ದಾರೆ.
ಕಳೆದ ನಾಲ್ಕಾರು ದಿನಗಳಿಂದ ಯಡಿಯೂರಪ್ಪನವರು ದಲಿತರÀನ್ನು ಮನೆಗೆ ಕರೆಸಿ ಊಟ ಹಾಕಿಸಿದ ವಿಚಾರವಾಗಿ ಸಿದ್ದರಾಮಯ್ಯನವರು ಟೀಕಿಸಿದ್ದರು. ಬೇಡವಾಗಿತ್ತಾದರೂ, ರಾಜಕೀಯ ಟೀಕೆ ಎಂದು ಕೊಳ್ಳಬಹುದಾದಷ್ಟು ಟೀಕೆ ಅದಾಗಿತ್ತು. ಮುಂದುವರಿದು ಬಿಜೆಪಿ ಮುಖಂಡ, ಅದರಲ್ಲೂ ದಲಿತ, ಕನ್ನಡ ಮತ್ತು ಸಂಸ್ಕøತಿ ಸಚಿವರಾಗಿದ್ದ ಗೋವಿಂದ ಕಾರಜೋಳ ರಾಹುಲ್ ಗಾಂಧಿಗೆ ದಲಿತ ಹೆಣ್ಣು ಇವೆ. ಮದುವೆ ಆಗಿ ಎಂದು ಆಹ್ವಾನಿಸಿದ್ದಾರೆ.
ಇವರೊಬ್ಬರು ಸಂಸ್ಕೃತಿ ಸಚಿವರಾಗಿದ್ದವರು, ಮದುವೆಯಂತಹ ಖಾಸಗಿ ವಿಷಯವನ್ನು ಅದರಲ್ಲೂ ದಲಿತ ಹೆಣ್ಣು ಮಕ್ಕಳು ಬಿಟ್ಟಿ ಇರುವರೇನೋ ಎನ್ನುವಂತೆ ಮಾತನಾಡಿರುವುದು ಖಂಡನಾರ್ಹ, ದಲಿತ ಹೆಣ್ಣು ಮಕ್ಕಳು ಮೊದಲು ಇದನ್ನು ಖಂಡಿಸಬೇಕು. ದಲಿತರ ಉದ್ದಾರದ ಬಗ್ಗೆ ಉದ್ದುದ್ದ ಬಾಷಣ ಬಿಗಿಯುವ ಸಂಘಟನೆಗಳು ಇಂತಹ ಸಂದರ್ಭದಲ್ಲಿ ಬಾಯಿ ಮುಚ್ಚಿ ಕುಳಿತಿರುವುದನ್ನು ಕಂಡರೆ ಇವರ್ಯಾರಿಗೂ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ಇಲ್ಲ ಮತ್ತು ಹಿಂದಿನಂತೆ ಗಂಡು ಹೇಳಿದಂತೆ ನೆಡೆಯುವ ದಾಸಿಯರಂತೆ ಇರಬೇಕೆನ್ನುವುದಕ್ಕೆ ಸಮ್ಮತಿ ನೀಡಿದಂತೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.







