ಅಕ್ರಮ ಸೇಂದಿ ಸಾಗಣೆ: ಇಬ್ಬರು ಆರೋಪಿಗಳ ಬಂಧನ

ತುಮಕೂರು, ಆ.31: ಮಧುಗಿರಿ ತಾಲೂಕಿನ ಪುಲಮಾಚಿ ಗ್ರಾಮದಿಂದ ತಾಡಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 18 ಲೀ.ಸೇಂದಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಜೆ.ಗಿರಿ ತಿಳಿಸಿದ್ದಾರೆ.
ಸೇಂದಿ ಸಾಗಿಸುತ್ತಿದ್ದ ಆರೋಪಿಗಳಾದ ಬೆಂಗಳೂರಿನ ಮಣಿಕಂಠಸ್ವಾಮಿ ಬಿನ್ ರೇವಣ್ಣ ಹಾಗೂ ರಾಮನಗರ ಜಿಲ್ಲೆ ಮಾಗಡಿ ತಾಲೂಕು ಮಾಡಬಾಳ ಗ್ರಾಮದ ಪಿ. ಕುಮಾರ್ ಬಿನ್ ಜಿ. ಪ್ರಕಾಶ್ ಕುಮಾರ್‍ನನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಬಕಾರಿ ನಿರೀಕ್ಷಕ ಎ.ಕೆ. ನವೀನ್ ಹಾಗೂ ಅಬಕಾರಿ ರಕ್ಷಕ ಹೆಂಜಾರಪ್ಪ ಅವರು ಆರೋಪಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಸ್ವಿಫ್ಟ್ ಡಿಸೈರ್ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story





