ಅಕ್ರಮ ದನ ಸಾಗಣೆ: ಓರ್ವ ಬಂಧನ

ಸುಂಟಿಕೊಪ್ಪ, ಆ.31: ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಹರದೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬೆಟ್ಟದಪುರ ಚಿಕ್ಕನೇರಳೆ ಗ್ರಾಮ (ಸಂತೆಮಾಳ)ದ ನಿವಾಸಿ ನೂರ್ ಅಹ್ಮದ್ ಅವರ ಪುತ್ರ ಸಮೀರ್ (28) ಆಶೋಕ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ತಾ.31 ರಂದು ಬೆಳಗ್ಗೆ 5.45ಕ್ಕೆ ಗರಗಂದೂರಿನಿಂದ 3 ಹೋರಿಗಳನ್ನು ತನ್ನ ವಾಹನದಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಕಂಡ ಹಿಂದೂ ಜಾಗರಣಾ ವೇದಿಕೆಯ ಸುನೀಲ್, ಡಾಲಿ, ರಜೀಶ್, ವಿನು ಹಾಗೂ ಮಂಜುನಾಥ ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬಳಿಕ ಖಚಿತ ಮಾಹಿತಿ ಮೇರೆಗೆ ಪಿಎಸ್ಸೈ ಜಯರಾಂ ಅವರು ಹರದೂರಿನಲ್ಲಿ ಸಮೀರ್ ನನ್ನು ತಡೆದು ಕಾರ್ಯಾಚರಣೆ ನಡೆಸಿದಾಗ ಹೋರಿಗಳನ್ನು ಕಡಿದು ಮಾಂಸಮಾಡಿ ಮಾರಾಟ ಮಾಡಲು ಕೊಂಡೊಯ್ಯುವುದಾಗಿ ಸಮೀರ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿ ವಾಹನವನ್ನು ಮುಟ್ಟುಗೋಲು ಹಾಕಿ ದನಗಳನ್ನು ಮೈಸೂರಿನ ಪಂಜರ್‍ಮೊಲ್ ರವಾನಿಸಿದ್ದಾರೆ.
ಆರೋಪಿ ವಿರುದ್ಧ ಮೊಕದ್ದಮೆ ದಾಖಲಿಸಿ ನ್ಯಾಯಂಗ ಬಂಧನಕ್ಕೆ ಒಳಪಡಿಸಿದ್ದಾರೆ.







