ನವೆಂಬರ್‌ನಲ್ಲಿ ಸೋಡಿಯಂ ವಿದ್ಯುತ್ ದೀಪ ಮುಕ್ತ ನಗರಸಭೆ ಘೋಷಣೆ
1773 ಸೋಡಿಯಂ ವಿದ್ಯುತ್ ದೀಪಗಳನ್ನು ಎಲ್‌ಇಡಿಗೆ ಪರಿವರ್ತನೆ
ಉಡುಪಿ, ಆ.31: ವಿದ್ಯುತ್ ಹಾಗೂ ಹಣ ಉಳಿಸುವ ನಿಟ್ಟಿನಲ್ಲಿ ಉಡುಪಿ ನಗರಸಭೆಯು ಸೋಡಿಯಂ ವಿದ್ಯುತ್ ದೀಪಗಳ ಬದಲು ಶೇ.100ರಷ್ಟು ಎಲ್‌ಇಡಿ ವಿದ್ಯುತ್ ದೀಪಗಳನ್ನು ಆಳವಡಿಸುವ ಸಂಕಲ್ಪವನ್ನು ಹೊಂದಿದ್ದು, ಈ ಮೂಲಕ ಉಡುಪಿ ನಗರಸಭೆಯು ನವೆಂಬರ್ ತಿಂಗಳಲ್ಲಿ ಸೋಡಿಯಂ ವಿದ್ಯುತ್ ದೀಪ ಮುಕ್ತ ನಗರಸಭೆ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ.
ಉಡುಪಿ ನಗರಸಭೆ ವ್ಯಾಪ್ತಿಯ 35ವಾರ್ಡ್‌ಗಳಲ್ಲಿ ಒಟ್ಟು 15,938 ಬೀದಿ ದೀಪಗಳಿದ್ದು, ಇವುಗಳಲ್ಲಿ 1773 ಸೋಡಿಯಂ ವಿದ್ಯುತ್ ದೀಪಗಳಿದ್ದವು. ಇವುಗಳಲ್ಲಿ ಈಗಾಗಲೇ 1144 ಸೋಡಿಯಂ ದೀಪಗಳನ್ನು ಎಲ್‌ಇಡಿ ದೀಪ ಗಳನ್ನಾಗಿ ಬದಲಾಯಿಸಲಾಗಿದೆ. ಇದೀಗ ಮತ್ತೆ 400 ಸೋಡಿಯಂ ದೀಪ ಗಳನ್ನು ಬದಲಾಯಿಸಿ ಎಲ್‌ಇಡಿ ಅಳವಡಿಸಲು ಟೆಂಡರನ್ನು ಕರೆಯಲಾಗಿದೆ. ಉಳಿದ 229 ಸೋಡಿಯಂ ದೀಪಗಳನ್ನು ನವೆಂಬರ್ ಅಂತ್ಯದೊಳಗೆ ಬದ ಲಾಯಿಸುವ ಯೋಜನೆಯನ್ನು ನಗರಸಭೆ ಹಾಕಿಕೊಂಡಿದೆ.
ಈ ಬಗ್ಗೆ ಇಂದು ನಗರಸಭೆ ಕಚೇರಿಯಲ್ಲಿ ಮಾಹಿತಿ ನೀಡಿದ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ‘ಎಲ್ಲ ದಾರಿದೀಪಗಳಿಗೆ ಎಲ್‌ಇಡಿ ದೀಪ ಗಳನ್ನು ಅಳವಡಿಸುವ ಮೂಲಕ ಉಡುಪಿ ನಗರಸಭೆಯು ರಾಜ್ಯದ ಪ್ರಥಮ ಸೋಡಿಯಂ ಮುಕ್ತ ನಗರಸಭೆಯಾಗಿ ಮೂಡಿಬರಲಿದೆ. ಈವರೆಗೆ ಮಾಡಿರುವ ಎಲ್‌ಇಡಿ ಪರಿವರ್ತನೆಯಿಂದ ವಾರ್ಷಿಕವಾಗಿ 9ಲಕ್ಷ ರೂ. ಯೂನಿಟ್ ವಿದ್ಯುತ್ ಹಾಗೂ ಆರ್ಥಿಕವಾಗಿ 53.21 ಲಕ್ಷ ರೂ. ಹಣ ಉಳಿತಾಯ ಮಾಡಲಾಗಿದೆ.’ ಎಂದರು.
ಕಳೆದ ಆರು ತಿಂಗಳುಗಳಿಂದ ಎಲ್‌ಇಡಿ ಪರಿವರ್ತನೆ ಪ್ರಕ್ರಿಯೆ ನಡೆಯು ತ್ತಿದ್ದು, ಇದೀಗ 400 ಎಲ್‌ಇಡಿ ಪರಿವರ್ತನೆಗೆ ಟೆಂಡರ್ ವಹಿಸಿಕೊಡಲಾಗಿದೆ. ಸದ್ಯವೇ ಈ ಕಾರ್ಯ ಮುಗಿಯಲಿದ್ದು, ಬಳಿಕ ಉಳಿದ 229 ದೀಪಗಳನ್ನು ನವಂಬರ್ ಅಂತ್ಯದೊಳಗೆ ಪರಿವರ್ತನೆ ಮಾಡುವ ಉದ್ದೇಶವನ್ನು ಹೊಂದ ಲಾಗಿದೆ ಎಂದು ಅವರು ತಿಳಿಸಿದರು.
‘ಬಯಲು ಮುಕ್ತ ಶೌಚಾಲಯದಲ್ಲಿ ಉಡುಪಿ ನಗರಸಭೆಗೆ ಎರಡನೆ ಬಾರಿ ಪ್ರಶಸ್ತಿ ದೊರೆತಿದ್ದು, ಇಂದು ಬೆಂಗಳೂರಿನ ಬಾಂಕ್ವೆಟ್ ಹಾಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದರಲ್ಲಿ ನಗರಸಭೆ ಅಧಿಕಾರಿಗಳು ಭಾಗ ವಹಿಸಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ’ ಎಂದು ಪೌರಾಯುಕ್ತ ಡಿ.ಮಂಜುನಾಥಯ್ಯ ಹೇಳಿದರು.







