ಕೈದಿ ಸಂಬಂಧಿಕರಿಂದ ಲಂಚಕ್ಕೆ ಬೇಡಿಕೆ: ಜೈಲರ್ ಭೀಮಾಶಂಕರ ಅಮಾನತ್ತು
ಬೆಂಗಳೂರು, ಆ.31: ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಕೈದಿಯೊಬ್ಬನ ಸಂಬಂಧಿಕರಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣ ಸಂಬಂಧ ಜೈಲರ್ ಎಸ್.ಭೀಮಾಶಂಕರ್ ಜಮಾದಾರ ಎಂಬಾತನನ್ನು ಅಮಾನತ್ತುಗೊಳಿಸಿ ಕರ್ನಾಟಕ ಕಾರಾಗೃಹಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಜೈಲರ್ ಭೀಮಾಶಂಕರ್ ಕರ್ತವ್ಯದಲ್ಲಿದ್ದಾಗ ಬಂಧಿಯೊಬ್ಬನನ್ನು ಚಿಕಿತ್ಸೆಗಾಗಿ ಹೊರ ಆಸ್ಪತ್ರೆಗೆ ಕಳುಹಿಸಿಕೊಡಲು ಅವರ ಸಂಬಂಧಿಕರಿಂದ ಹಣದ ಬೇಡಿಕೆಯಿಟ್ಟಿದ್ದ. ಈ ಬಗ್ಗೆ ವಿಚಾರಣೆ ನಡೆಸಿದಾಗ ತಪ್ಪು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ಅಮಾನತ್ತು ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಪ್ರಕಟನೆ ತಿಳಿಸಿದೆ.
Next Story





