ಮಮತೆಯ ತೊಟ್ಟಿಲು ಕಾರ್ಯಕ್ರಮ ಉದ್ಘಾಟನೆ

ಉಡುಪಿ, ಆ.31: ಸಂತೆಕಟ್ಟೆ ವಸುಧ ನಗರದ ದತ್ತು ಕೇಂದ್ರ ಕೃಷ್ಣಾನುಗ್ರಹದ ವತಿಯಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಉಡುಪಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಗುರುವಾರ ಕೃಷ್ಣಾನುಗ್ರಹದಲ್ಲಿ ಹಮ್ಮಿ ಕೊಳ್ಳಲಾದ ಮಮತೆಯ ತೊಟ್ಟಿಲು ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೋರ್ವಿ ಉದ್ಘಾಟಿಸಿ ದರು.
ಈ ಸಂದರ್ಭದಲ್ಲಿ ಬಾಲಕಿ ದುರ್ಗಾ ಬರೆದಿರುವ ‘ವ್ಯಥೆಯ ಕಥೆ’ ಪುಸ್ತಕ ವನ್ನು ತರಂಗ ವಾರಪತ್ರಿಕೆಯ ಆಡಳಿತ ಸಂಪಾದಕಿ ಸಂಧ್ಯಾ ಪೈ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಟಿ.ವಿ.ರಾವ್ ಪ್ರಶಸ್ತಿಯನ್ನು ತಲ್ಲೂರು ಶಿವ ರಾಮ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ್ ಮಾತನಾಡಿದರು. ಉಡುಪಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಬಿ.ಕೆ.ನಾರಾಯಣ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಶ್ರೀಕೃಷ್ಣ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಉಮೇಶ್ ಪ್ರಭು ವಹಿಸಿದ್ದರು.
ಸಂಸ್ಥೆಯ ಆಡಳಿತಾಧಿಕಾರಿ ಉದಯ ಕುಮಾರ್ ಸ್ವಾಗತಿಸಿದರು. ಉಸ್ತು ವಾರಿ ಮರಿನಾ ಎಲಿಜಬೆತ್ ಮಮತೆಯ ತೊಟ್ಟಿಲು ಕುರಿತು ಮಾಹಿತಿ ನೀಡಿ ದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.







