ಮಟ್ಕಾ: ಮೂವರ ಬಂಧನ
ಉಡುಪಿ, ಆ.31: ಮಟ್ಕಾ ಜುಗಾರಿಗೆ ಸಂಬಂಧಿಸಿದಂತೆ ಆ.30ರಂದು ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಮಾರ್ಕೇಟ್ ಬಳಿ ಶಿರೂರು ನಿವಾಸಿ ಶೇಖರ(43) ಎಂಬಾತನನ್ನು ಬೈಂದೂರು ಪೊಲೀಸರು, ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಉಚ್ಚಿಲ ಬಸ್ ನಿಲ್ದಾಣದ ಬಳಿ ಭಾಸ್ಕರ ನಗರದ ಮುಹಮ್ಮದ್ ಯೂಸುಬ್(54) ಎಂಬಾತನನ್ನು ಉಡುಪಿ ಡಿಸಿಐಬಿ ಪೊಲೀಸರು ಹಾಗೂ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಅಂಚೆ ಕಛೇರಿ ಬಳಿ ಗಂಗೊಳ್ಳಿ ದಾಕುಹಿತ್ಲು ನಿವಾಸಿ ರಾಘವೇಂದ್ರ (34) ಎಂಬಾತನನ್ನು 2,070 ರೂ. ಹಾಗೂ ಒಂದು ಸ್ಕೂಟರ್ ಸಹಿತ ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story