ಪಾಕ್‌ಗೆ ಅಮೆರಿಕದಿಂದ ಶರತ್ತುಬದ್ಧ ಸೇನಾ ನೆರವು

ವಾಶಿಂಗ್ಟನ್, ಆ. 31: ಪಾಕಿಸ್ತಾನಕ್ಕೆ 225 ಮಿಲಿಯ ಡಾಲರ್ (ಸುಮಾರು 1,439 ಕೋಟಿ ರೂಪಾಯಿ) ವೌಲ್ಯದ ಶರತ್ತುಬದ್ಧ ಸೇನಾ ನೆರವನ್ನು ನೀಡಿರುವುದಾಗಿ ಅಮೆರಿಕದ ಟ್ರಂಪ್ ಆಡಳಿತ ಸಂಸತ್ತು ಕಾಂಗ್ರೆಸ್‌ಗೆ ಮಾಹಿತಿ ನೀಡಿದೆ.
ಭಯೋತ್ಪಾದಕ ಗುಂಪುಗಳ ವಿರುದ್ಧ ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡರೆ ಮಾತ್ರ ಈ ನೆರವನ್ನು ನಗದೀಕರಿಸಲು ಆ ದೇಶಕ್ಕೆ ಸಾಧ್ಯವಾಗುತ್ತದೆ ಎಂದು ಅದು ಹೇಳಿದೆ.
ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವುದಕ್ಕಾಗಿ ಪಾಕಿಸ್ತಾನದ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹರಿಹಾಯ್ದ ಒಂದು ವಾರದ ಬಳಿಕ ಈ ಬೆಳವಣಿಗೆ ನಡೆದಿದೆ.
Next Story





