ರಾಸಾಯನಿಕ ಸ್ಥಾವರದಲ್ಲಿ ಅವಳಿ ಸ್ಫೋಟ

ಹ್ಯೂಸ್ಟನ್, ಆ. 31: ಭೀಕರ ಚಂಡಮಾರುತದ ದಾಳಿಗೆ ಒಳಗಾಗಿರುವ ಟೆಕ್ಸಾಸ್ ರಾಜ್ಯದ ಪ್ರವಾಹಪೀಡಿತ ರಾಸಾಯನಿಕ ಸ್ಥಾವರವೊಂದರಲ್ಲಿ ಎರಡು ಸ್ಫೋಟಗಳು ನಡೆದಿವೆ ಎಂದು ಸ್ಥಳೀಯ ತುರ್ತು ಪರಿಸ್ಥಿತಿ ನಿರ್ವಹಣೆ ಅಧಿಕಾರಿಗಳು ಗುರುವಾರ ತಿಳಿಸಿದರು.
ಮುನ್ನೆಚ್ಚರಿಕಾ ಕ್ರಮವಾಗಿ, ಆರ್ಗಾನಿಕ್ ಪೆರಾಕ್ಸೈಡ್ ಸ್ಥಾವರದಿಂದ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜನರನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳು ಈಗಾಗಲೇ ಆದೇಶ ನೀಡಿದ್ದಾರೆ.
ನೀರಿನಿಂದ ಆವೃತವಾಗಿರುವ ಸ್ಥಾವರ ಸ್ಫೋಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
Next Story





