ಹಜ್ ಯಾತ್ರೆ...
ಹಜ್ ಯಾತ್ರೆಯ ಪ್ರಮುಖ ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸುವುದಕ್ಕಾಗಿ ಲಕ್ಷಾಂತರ ಯಾತ್ರಿಗಳು ಗುರುವಾರ ಮಕ್ಕಾ ಹೊರವಲಯದ ಅರಫಾ ಮೈದಾನದಲ್ಲಿ ಸೇರಿದ್ದಾರೆ. ಶ್ವೇತವಸ್ತ್ರಧಾರಿ ಯಾತ್ರಿಕರು ಬುಧವಾರ ರಾತ್ರಿಯಿಂದಲೇ ಮಿನಾದಿಂದ ಅರಫಾಗೆ ಆಗಮಿಸುತ್ತಿದ್ದಾರೆ.ಮಕ್ಕಾದ ಸುಡುವ ಬಿಸಿಲನ್ನು ಲೆಕ್ಕಿಸದೆ, ಕೊಡೆ ಹಿಡಿದುಕೊಂಡಿರುವ ಯಾತ್ರಿಗಳು ಪವಿತ್ರ ಸ್ಥಳದ ಹೃದಯ ಭಾಗದಲ್ಲಿರುವ ಸಣ್ಣ ಬೆಟ್ಟ ‘ಜಬಲ್ ರಹ್ಮ’ದ ಸಮೀಪಕ್ಕೆ ಹೋಗುತ್ತಿದ್ದಾರೆ ಹಾಗೂ ಅದನ್ನು ಹತ್ತುತ್ತಿದ್ದಾರೆ. ‘ವಕೂಫೆ-ಅರಫಾ’ ಎಂಬುದಾಗಿ ಕರೆಯಲ್ಪಡುವ ಈ ವಿಧಿವಿಧಾನದ ಭಾಗವಾಗಿ ಸುಮಾರು 20 ಲಕ್ಷ ಯಾತ್ರಿಕರು ಸಂಜೆವರೆಗೆ ಅರಫಾದಲ್ಲೇ ಕಳೆದರು. ಭಾರೀ ಸಂಖ್ಯೆಯಲ್ಲಿ ನಿಯೋಜನೆಗೊಂಡಿರುವ ಭದ್ರತಾ ಪಡೆಗಳು ಯಾತ್ರಿಕರ ಸುರಕ್ಷಿತ ಪ್ರಯಾಣವನ್ನು ಖಾತರಿಪಡಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿವೆ. ಸಮಸ್ಯೆ ಕಂಡುಬಂದ ಸ್ಥಳಗಳನ್ನು ಗುರುತಿಸಲು ಆಕಾಶದಲ್ಲಿ ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳು ಹಾರಾಡುತ್ತಿವೆ.
Next Story





