ಇಸ್ರೊ ಉಪಗ್ರಹ ಉಡಾವಣೆ ವಿಫಲ..!
ಬಹು ನಿರೀಕ್ಷಿತ ಖಾಸಗಿ ನಿರ್ಮಿತ ಪ್ರಥಮ ಪಥ ನಿರ್ದೇಶಕ ಉಪಗ್ರಹ ಐಆರ್‌ಎನ್‌ಎಸ್‌ಎಸ್-1ಎಚ್ ಉಡಾವಣೆ ವಿಫಲವಾಗಿದ್ದು, ಇದರಿಂದ ಇಸ್ರೋಗೆ ತೀವ್ರ ಹಿನ್ನಡೆ ಉಂಟಾಗಿದೆ. ಉಷ್ಣ ನಿರೋಧಕ ಕವಚ ಪ್ರತ್ಯೇಕಗೊಳ್ಳದೇ ಇರುವುದರಿಂದ ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡಿಲ್ಲ ಎಂದು ಇಸ್ರೋದ ಮುಖ್ಯಸ್ಥ ಎ.ಎಸ್. ಕಿರಣ್ ಕುಮಾರ್ ಹೇಳಿದ್ದಾರೆ. ಇದುವರೆಗೆ ಯಾವುದೇ ಹಂತದಲ್ಲಿ ಸಮಸ್ಯೆ ಉಂಟಾಗಿರಲಿಲ್ಲ. ಉಪಗ್ರಹದ ಉಷ್ಣ ನಿರೋಧಕ ಪತ್ಯೇಕಗೊಂಡಿಲ್ಲ. ಇದರಿಂದ ಉಪಗ್ರಹ ಕಕ್ಷೆಗೆ ಸೇರಲು ಸಾಧ್ಯವಾಗಿಲ್ಲ ಎಂದು ಕುಮಾರ್ ಅವರು ತಿಳಿಸಿದರು. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಂಶ ಕೇಂದ್ರದಿಂದ 7 ಗಂಟೆಗೆ ಈ ಉಪಗ್ರಹವನ್ನು ಪಿಎಸ್‌ಎಲ್‌ವಿಯಿಂದ ಉಡಾಯಿಸಲಾಯಿತು. ಈ ಉಪಗ್ರಹ ಉಡಾವಣೆಗೆ ಇಸ್ರೊ ನಿನ್ನೆ 2 ಗಂಟೆಯಿಂದ 29 ಗಂಟೆ ಕ್ಷಣಗಣನೆ ಆರಂಭಿಸಿತ್ತು.
Next Story





