Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘ಆಧಾರ್’ ಎಂಬ ಮಹಾ ಹಗರಣದ ‘ಕಣಿ’

‘ಆಧಾರ್’ ಎಂಬ ಮಹಾ ಹಗರಣದ ‘ಕಣಿ’

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು1 Sept 2017 12:20 AM IST
share
‘ಆಧಾರ್’ ಎಂಬ ಮಹಾ ಹಗರಣದ ‘ಕಣಿ’

ನಂದನ್ ನಿಲೇಕಣಿ ಎಂಬ ಅರ್ಧ ರಾಜಕಾರಣಿ; ಅರ್ಧ ಐಟಿ ತಜ್ಞ, ತನ್ನ ಕಕ್ಷೆಯಲ್ಲಿ ಒಂದು ಸುತ್ತು ತಿರುಗಿ, ಈಗ ಮತ್ತೆ ಇನ್ಫೋಸಿಸ್ ಎಂಬ ತನ್ನ ಗೂಡು ಸೇರಿಕೊಂಡಿದ್ದಾರೆ. ಹೀಗೆ ‘ಘರ್ ವಾಪಸಿ’ ಆಗುವ ಹೊತ್ತಿಗೆ, ಆ ಪುಣ್ಯಾತ್ಮ ದೇಶದ ಪ್ರತಿಯೊಬ್ಬ ಪ್ರಜೆಯ ಖಾಸಗಿತನವನ್ನು ತಟ್ಟೆಯಲ್ಲಿಟ್ಟು ಅಮೆರಿಕದಂತಹ ಯುದ್ಧ ಪಿಪಾಸು ದೇಶಗಳ ಕೈಗೆ ಒಪ್ಪಿಸಿ ಹೋಗಿದ್ದಾರೆ ಎಂದು ಬಲವಾದ ಗುಮಾನಿ ಆರಂಭವಾಗಿದೆ.

ಕಳೆದವಾರ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠವು ಖಾಸಗಿತನ ಮೂಲಭೂತ ಹಕ್ಕು ಎಂದು ಪ್ರತಿಪಾದಿಸುವ ಮೂಲಕ ಕೋಟೆಯಿಡೀ ಸೂರೆಹೋದ ಮೇಲೆ ದಿಡ್ಡಿ ಬಾಗಿಲು ಹಾಕುವ ಶಾಸ್ತ್ರ ಮಾಡಿ ಮುಗಿಸಿದೆ ಯಾದರೂ, ಆಗಿರುವ ಹಾನಿಯನ್ನು ಸರಿಪಡಿಸಲು ಸಾಧ್ಯ ವಾಗುವುದು ಕಷ್ಟ. ಸುಪ್ರೀಂ ಕೋರ್ಟಿಗೆ ಈ ಪ್ರಕರಣದಲ್ಲಿ ಅರ್ಜಿದಾರರಲ್ಲಿ ಒಬ್ಬರಾಗಿರುವ ನಿವೃತ್ತ ಸೇನಾಧಿಕಾರಿ ಕರ್ನಲ್ ಮ್ಯಾಥ್ಯೂ ಥಾಮಸ್ ವಿವರಿಸುವುದನ್ನು ಕೇಳಿದರೆ ಇಡಿಯ ಬೆನ್ನುಕೋಲು ಚಳಿಯೇರಿ ಕಂಪಿಸತೊಡಗುತ್ತದೆ.

ಬಿಜೆಪಿ ಪ್ರತಿಪಕ್ಷವಾಗಿದ್ದಾಗ 2011ರ ವೇಳೆಯಲ್ಲಿ, ಬಿಜೆಪಿ ಸಂಸದೀಯ ಪಕ್ಷದ ಸದಸ್ಯರಿಗೆ ಆಧಾರ್ ಬಗ್ಗೆ ಕರ್ನಲ್ ಮ್ಯಾಥ್ಯೂ ಎಳೆಯೆಳೆಯಾಗಿ ವಿವರಿಸಿದ್ದರು. ಆಗ ಹಾಜರಿದ್ದ ಅಡ್ವಾಣಿ, ರಾಜನಾಥ್ ಸಿಂಗ್ ಮತ್ತು ಜೇಟ್ಲಿ ಮೊದಲಾದ ನಾಯಕರು ಇದನ್ನೆಲ್ಲ ಪರಾಂಬರಿಸಿ ನೋಡಿ, ಮುಂದೆ ಚುನಾವಣೆಯಲ್ಲೂ ಆಧಾರ್ ವಿರೋಧಿಸಿಯೇ ತಮ್ಮ ಸರಕಾರ ರಚನೆಯಾಗಲು ಕಾರಣರಾಗಿದ್ದರು. ಆದರೆ ‘ಅಡ್ವಾಣಿ ಯುಗ’ ಪಲ್ಲಟವಾಗಿ ಹೊಸ ಸರಕಾರದ ಮುಖ್ಯಸ್ಥರಾದ ನರೇಂದ್ರ ಮೋದಿಯವರು ಬರುತ್ತಲೇ ಆಧಾರ್ ಮಾರ್ಕೆಟಿಂಗ್ ಏಜನ್ಸಿ ಪಡೆದುಬಂದವರಂತೆ ವರ್ತಿಸಿ, ಸಿಕ್ಕ ಸಿಕ್ಕದ್ದಕ್ಕೆಲ್ಲ ಆಧಾರ್ ಕಡ್ಡಾಯ ಮಾಡುತ್ತಾ ಸಾಗಿದ್ದೇ, ಈ ಪ್ರಕರಣ ಸುಪ್ರೀಂ ಕೋರ್ಟಿನ ಮೆಟ್ಟಿಲೇರಲು ಮೂಲ ಕಾರಣ.

ಆಧಾರ್ ಎಂಬುದು ಮಾಹಿತಿ ಕಸದ ರಾಶಿಯಾಗಿದ್ದು,inherently probabilistic and inherently fallible ದತ್ತಾಂಶಗಳ ಸಂಗ್ರಹವಾಗಿದೆ. ಅದರಿಂದ ದೇಶಕ್ಕೆ ಚಿಕ್ಕಾಸಿನ ಪ್ರಯೋಜನವೂ ಆಗದು ಎಂಬುದು ದತ್ತಾಂಶ ತಂತ್ರಜ್ಞರ ಅಭಿಪ್ರಾಯ. ಅದಕ್ಕೆ ಸಕಾರಣಗಳೂ ಅವರ ಬಳಿ ಇವೆ. ಆದರೆ, ಈ ವಿಚಾರ ಇಷ್ಟಕ್ಕೇ ಮುಗಿಯುವುದಿಲ್ಲ ಎಂಬಲ್ಲಿಂದ ಲೇ ಆಧಾರ್ ಎಂಬ ಮಹಾ ಹಗರಣ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ.

ಸ್ವತಃ ಸರಕಾರ ಜವಾಬ್ದಾರಿಯುತವಾಗಿ ಮಾಡಬೇಕಾದ್ದ ಆಧಾರ್ ದತ್ತಾಂಶವನ್ನು ಅಥೆಂಟಿಕೇಟ್ ಮಾಡಿಕೊಡುವ ಗುತ್ತಿಗೆಯನ್ನು ವಹಿಸಿಕೊಂಡಿರುವುದು ಅಮೆರಿಕ ಮೂಲದ ‘ಎಲ್ ವನ್ ಐಡೆಂಟಿಟಿ ಸೊಲ್ಯೂಷನ್ಸ್ ಆಪರೇಟಿಂಗ್ ಕಂಪೆನಿ’. ಹಾಲಿ ಅದು ‘ಸಾಫ್ರಾನ್ ಐಡೆಂಟಿಟಿ ಆ್ಯಂಡ್ ಸೆಕ್ಯುರಿಟಿ’ ಎಂಬ ಫ್ರೆಂಚ್ ಮೂಲದ ಬಹುರಾಷ್ಟ್ರೀಯ ಕಂಪೆನಿಯ ಭಾಗ. ಈ ಅಮೆರಿಕನ್ ಕಂಪೆನಿಯ ಆಡಳಿತ ಮಂಡಳಿಯಲ್ಲಿರುವವರು ಅಮೆರಿಕದ ಸೆಂಟ್ರಲ್ ಇಂಟಲಿಜನ್ಸ್ ಏಜನ್ಸಿ(CIA), ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ಸ್(FBI), ಅಮೆರಿಕನ್ ರಕ್ಷಣಾ ಸಂಶೋಧನಾ ಕೇಂದ್ರಗಳ ಮಾಜಿ ಅಧಿಕಾರಿಗಳು!

ಆದರೆ, ದೇಶದ ಅಂದಾಜು 120 ಕೋಟಿ ನಾಗರಿಕರ ಫಿಂಗರ್ ಪ್ರಿಂಟ್, ಐರಿಸ್ ಸ್ಕ್ಯಾನ್ ಮತ್ತಿತರ ಬಯೋಮೆಟ್ರಿಕ್ ಮಾಹಿತಿಗಳನ್ನು ತಟ್ಟೆಯಲ್ಲಿರಿಸಿ ಅಮೆರಿಕದ ಕಾಲಿನಡಿ ಇಟ್ಟು ಕೈಮುಗಿಯುವ ಮೂಲಕ ‘ದೇಶಭಕ್ತಿ’ ಪ್ರದರ್ಶಿಸಲಾಗಿದೆ ಎಂದು ಕರ್ನಲ್ ಮ್ಯಾಥ್ಯೂ ಆಪಾದಿಸುತ್ತಿದ್ದಾರೆ. ಇಷ್ಟೇ ಅಲ್ಲ, ಈ ಅಮೆರಿಕನ್ ಕಂಪೆನಿಗೆ ಪ್ರತಿಯೊಂದು ಆಧಾರ್ ನಂಬರ್ ಅಥೆಂಟಿಕೇಟ್ ಮಾಡಿ ಕೊಡುವುದಕ್ಕೆ ರೂ. 2.75 ಪಾವತಿ ಮಾಡಲಾಗುತ್ತಿದೆಯಂತೆ!

ಹಿಂದೆ ಅಮೆರಿಕ ಸರಕಾರದಿಂದಲೇ ಅನೈತಿಕ ವ್ಯವಹಾರಕ್ಕಾಗಿ 63 ಮಿಲಿಯ ಡಾಲರ್ ದಂಡ ಹಾಕಿಸಿಕೊಂಡ ಈ ಸಂಸ್ಥೆಯನ್ನು ಯಾವುದೇ ಜಾಗತಿಕ ಟೆಂಡರ್ ಕರೆಯದೆ, request for proposal ಎಂದು ಕರೆಸಿ, ಲಾಬಿ ಮೂಲಕ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಗಳನ್ನು ಸಲ್ಲಿಸಿದರೆ, ವರ್ಷಗಟ್ಟಲೆ ಮಾಹಿತಿ ನೀಡದೆ ಸತಾಯಿಸಲಾಗುತ್ತಿದೆ. ವಿದೇಶಿ ಕಂಪೆನಿಗಳು ಆಧಾರ್ ನಿರ್ವಹಣೆಯಲ್ಲಿ ಒಳಗೊಂಡಿವೆ ಎಂಬುದನ್ನು ದೇಶದ ಜನರಿಂದ ಮುಚ್ಚಿಡಲಾಗುತ್ತಿದೆ. ಸ್ವತಃ ಕರ್ನಲ್ ಮ್ಯಾಥ್ಯೂ ಹೈಕೋರ್ಟಿನಲ್ಲಿ ಹಲವಾರು ದಾವೆಗಳನ್ನು ಸರಕಾರ ಹಾಗೂ ಆಧಾರ್ ಪ್ರಾಧಿಕಾರದ ವಿರುದ್ಧ ಹಾಕಿ ಹೋರಾಡುತ್ತಿದ್ದಾರೆ.

ಹಿಂದೆಲ್ಲ ಕಾಂಗ್ರೆಸ್ ರಾಜಕಾರಣಿಗಳು ಮಿಸುಕಾಡಿದರೆ ಅವರು CIA ಏಜಂಟರೆಂದು ಜರೆಯುತ್ತಿದ್ದ ದೇಶಭಕ್ತರ ಗಢಣ ಈಗ ನೇರಾನೇರ ಅಮೆರಿಕದ ಗುಪ್ತಚರ ಅಧಿಕಾರಿಗಳಿಗೇ ದೇಶದ ಮಾಹಿತಿಯನ್ನು ತಟ್ಟೆಯಲ್ಲಿಟ್ಟು ನೀಡಿದೆ ಮತ್ತು ಆ ಬಗ್ಗೆ ಲಿಖಿತ ಒಪ್ಪಂದ ಮಾಡಿಕೊಂಡಿದೆ ಎಂಬುದು ವಾಸ್ತವ. ಇದೇ ಅಮೆರಿಕನ್ ಕಂಪೆನಿ ಪಾಕಿಸ್ತಾನದಲ್ಲೂ ಈ ರೀತಿಯ ಮಾಹಿತಿಯನ್ನು ಕಲೆಹಾಕಿದ್ದು, ಜಗತ್ತಿನಲ್ಲಿ ಸದ್ಯಕ್ಕೆ ಭಾರತ ಮತ್ತು ಪಾಕಿಸ್ತಾನ ಮಾತ್ರ ಈ ರೀತಿ ಬಯೋಮೆಟ್ರಿಕ್ಸ್ ಸಹಿತ ತನ್ನ ದೇಶದ ಪ್ರಜೆಗಳ ಬಗ್ಗೆ ಮಾಹಿತಿಯನ್ನು ವಿದೇಶಿ ಕಂಪೆನಿಯ ಮೂಲಕ ನಿಭಾಯಿಸತೊಡಗಿರುವ ದೇಶಗಳಂತೆ.

ಆಧಾರ್ ಪ್ರಾಧಿಕಾರ ಸಂಗ್ರಹಿಸಿರುವ ಮಾಹಿತಿಗಳ ಗುಣಮಟ್ಟದ ಬಗ್ಗೆ ಹೇಳಹೋದರೆ ಅದೇ ಇನ್ನೊಂದು ಹಗರಣ. ಅಲ್ಲಿ ಆಧಾರ್ ವಿನಾಯಿತಿ ಮಾಡಲಾಗಿರುವ ವೃದ್ಧರು, ಮಕ್ಕಳು, ವಲಸೆ ಕಾರ್ಮಿಕರು ಇತ್ಯಾದಿ ವರ್ಗ ಒಟ್ಟು ಶೇ. 75ರವರೆಗೂ ಮುಟ್ಟುತ್ತದೆ. ಉಳಿದ ಶೇ. 25ರಲ್ಲೂ ಸಂಗ್ರಹಿಸಲಾಗಿರುವ ಮಾಹಿತಿ ಗುಣಮಟ್ಟ ಏನೇನೂ ಚೆನ್ನಾಗಿಲ್ಲ. ಪ್ರತೀ 60ಕ್ಕೆ ಒಬ್ಬರ ಮಾಹಿತಿ ಕಳಪೆ ದತ್ತಾಂಶ ಎಂದು ತಜ್ಞರು ಅಭಿಪ್ರಾಯ ಪಟ್ಟಿ ದ್ದಾರೆ. ಯಾಕೆಂದರೆ, ಇಂತಹ ಮಾಹಿತಿ ಸಂಗ್ರಹ ಮಾಡಿರುವುದು ಆಳುವ ಪಕ್ಷಕ್ಕೆ ಬೇಕಾಗಿರುವ ರಾಜಕಾರಣಿಗಳಿಗೆ ಸಂಬಂಧಪಟ್ಟ ಏಜನ್ಸಿಗಳು ಮತ್ತು ಅವರಿಂದ ಉಪಗುತ್ತಿಗೆ ಪಡೆದಿರುವ ಬೇಜವಾಬ್ದಾರಿ ವ್ಯಕ್ತಿಗಳು ಎಂದು ಹೇಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳೂ ದಾಖಲಾಗಿವೆ. ಆದರೆ ದೇಶದ ಮಾಧ್ಯಮಗಳು ಈ ಬಗ್ಗೆ ಮಾತನಾಡುತ್ತಿಲ್ಲ.

ಇನ್ನು ರಾಜಕಾರಣಿಗಳಿಗೆ ಆಧಾರ್ ಏನು ಲಾಭ ತರಲಿದೆ ಎಂಬ ಪ್ರಶ್ನೆಗೆ, ಮುಂದಿನ ಚುನಾವಣೆಯಲ್ಲಿ ಓಟಿಗಾಗಿ ಕಾಸು ಹಂಚುವ ವಿಧಾನ ಬದಲಾಗಲಿದೆ ನೋಡಿ ಎನ್ನುತ್ತಿದ್ದಾರೆ ತಜ್ಞರು. ಮುಂದಿನ ಚುನಾವಣೆಯ ವೇಳೆ ಜನಧನ್ ಖಾತೆಗಳ ಮೇಲೆ ಕಣ್ಣಿಟ್ಟುಕೊಂಡಿರಿ ಎಂದು ಈಗಾಗಲೇ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲಾಗಿದೆ. ಇಂತಹದೇ ಒಂದು ದೊಡ್ಡ ಹಗರಣ ಕೊಲಂಬಿಯಾ ದೇಶದಲ್ಲಿ ನಡೆದಿರುವ ಹಿನ್ನೆಲೆ ಕೂಡ ಇದೆ.

ಒಟ್ಟಿನಲ್ಲಿ, ಇಂಗ್ಲೆಂಡಿನಲ್ಲಿ ಇತ್ತೀಚೆಗೆ ಇಂತಹ ಗುರುತು ಚೀಟಿ ಅಭಿಯಾನವನ್ನು ಕಸದ ಬುಟ್ಟಿಗೆ ಸೇರಿಸಿದ ಅಲ್ಲಿನ ಪ್ರಧಾನಿ ತೆರೇಸಾ ಮೇ ಅವರು ಸಂಸತ್ತಿನಲ್ಲಿ ಈ ಗುರುತು ಚೀಟಿಗಳನ್ನು Intrusive Bullying ಎಂದು ಜರೆದಿದ್ದಾರೆ. ಅಂದರೆ, ನಾವಿವತ್ತು ಎದುರಿಸುತ್ತಿರು ವುದು ‘‘ಡಿಜಿಟಲ್ ತುರ್ತುಪರಿಸ್ಥಿತಿಯನ್ನು!’’.

ಎಲ್ಲ ವಿವರಗಳಿಗೆ ಕರ್ನಲ್ ಮ್ಯಥ್ಯೂ ಅವರ ಈ ಸಂದರ್ಶನಗಳನ್ನು ಕೇಳಬಹುದು. ಇವು ಮೂರು ಭಾಗಗಳಲ್ಲಿವೆ.
ಭಾಗ 1: https://www.youtube.com/watch?v=J8YtkVf2cjY

ಭಾಗ 2: https://www.youtube.com/watch?v=Nu6rrSt6Koo

ಭಾಗ 3: https://www.youtube.com/watch?v=tweCG9se2hw

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X