ಮುಂಬೈನಲ್ಲಿ ಬಹುಮಹಡಿ ಕಟ್ಟಡ ಕುಸಿತ: ಮೃತರ ಸಂಖ್ಯೆ 34ಕ್ಕೇರಿಕೆ

ಮುಂಬೈ, ಸೆ.1: ದಕ್ಷಿಣ ಮುಂಬೈನ ಜನನಿಬಿಡ ಬೆಂಡಿಬಜಾರ್‌ನಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ನೂರಾರು ವರ್ಷ ಹಳೆಯ ಬಹುಮಹಡಿ ಕಟ್ಟಡ ಕುಸಿತ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 34ಕ್ಕೇರಿದೆ.
ಕಟ್ಟಡದ ಅವಶೇಷಗಳಡಿ ಸಿಲುಕಿ ಹಾಕಿಕೊಂಡಿರುವವರ ರಕ್ಷಣಾ ಕಾರ್ಯಾಚರಣೆ ಈಗಲೂ ಮುಂದುವರಿದಿದ್ದು 9 ಮಂದಿಯನ್ನು ರಕ್ಷಿಸಿ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
8 ಅಗ್ನಿಶಾಮಕ ದಳಗಳು, ಒಂದು ರಕ್ಷಣಾ ವ್ಯಾನ್ ಹಾಗೂ ಆ್ಯಂಬುಲೆನ್ಸ್‌ಗಳು ಘಟನಾ ಸ್ಥಳದಲ್ಲಿ ಬೀಡುಬಿಟ್ಟಿವೆ.
ಮುಂಬೈನಲ್ಲಿಧಾರಾಕಾರ ಮಳೆ ಸುರಿದ ಎರಡು ದಿನಗಳ ಬಳಿಕ ಈ ಹಳೆಯ ಕಟ್ಟಡ ಕುಸಿದುಬಿದ್ದಿದೆ.
Next Story





