ಬೋಫೋರ್ಸ್ ಹಗರಣ: ಅಕ್ಟೋಬರ್ ಅಂತ್ಯಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ಹೊಸದಿಲ್ಲಿ,ಸೆ.1: ಅಕ್ಟೋಬರ್‌ನ ಕೊನೆಯ ವಾರದಲ್ಲಿ ಬೋಫೋರ್ಸ್ ಹಗರಣದ ಅಂತಿಮ ವಿಚಾರಣೆ ಆರಂಭಿಸುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ಜಸ್ಟಿಸ್‌ಗಳಾದ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ್ ಅವರಿದ್ದ ನ್ಯಾಯಪೀಠ ವಿಚಾರಣೆಯನ್ನು ಅಕ್ಟೋಬರ್‌ನ ಕೊನೆಯ ವಾರದಲ್ಲಿ ಆರಂಭಿಸಲು ನಿರ್ಧರಿಸಿದೆ.
ದೂರುದಾರ, ಬಿಜೆಪಿ ಮುಖಂಡ ಹಾಗೂ ವಕೀಲ ಅಜಯ್ ಅಗರ್‌ವಾಲ್ ಕೇಸ್‌ನ ವಿಚಾರಣೆಯನ್ನು ಶೀಘ್ರವೇ ನಡೆಸುವಂತೆ ಕೇಳಿಕೊಂಡರು. 2005ರ ಮೇ 31 ರಂದು ದಿಲ್ಲಿ ಹೈಕೋರ್ಟ್ ಬೋಫೊರ್ಸ್ ಪ್ರಕರಣದಲ್ಲಿ ಒಳಗೊಂಡಿದ್ದ ಯುರೋಪ್ ಮೂಲದ ಹಿಂದೂಜಾ ಸಹೋದರರಾದ ಶ್ರೀಚಂದ್, ಗೋಪಿಚಂದ್ ಹಾಗೂ ಪ್ರಕಾಶ್ ಚಂದ್‌ರನ್ನು ದೋಷಮುಕ್ತಗೊಳಿಸಿತ್ತು. ಬೋಫೊರ್ಸ್ ಕಿಕ್‌ಬ್ಯಾಕ್ ಹಗರಣದ ತನಿಖೆ ಪುನರಾರಂಭಿಸುವಂತೆ ಕೋರಿ ಅಗರವಾಲ್ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
Next Story





