ಶ್ರೀಲಂಕಾದ ಕನ್ಯೆಗೆ ಮನಸೋತ ಬಾಲಿವುಡ್ ನಟ ಶಿವದಾಸನಿ

ಕೊಲಂಬೊ, ಸೆ.1: ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಶ್ರೀಲಂಕಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಶ್ರೀಲಂಕಾದ ನಿನ್ ಡುಸಾಂಜ್‌ರನ್ನು ವಿವಾಹವಾಗಿದ್ದಾರೆ.
ಅಫ್ತಾಬ್ ಹಾಗೂ ನಿನ್ 2014ರ ಜೂ.5ರಂದು ವಿವಾಹ ನೋಂದಣಿ ಮಾಡಿಕೊಂಡಿದ್ದರು. ಆದರೆ ಸಾಂಪ್ರದಾಯಿಕವಾಗಿ ವಿವಾಹವಾಗಿರಲಿಲ್ಲ. ಇತ್ತೀಚೆಗೆ ಶ್ರೀಲಂಕಾಕ್ಕೆ ಭೇಟಿ ನೀಡಿದ ಇಬ್ಬರೂ ಪ್ರೀತಿಯ ಬಲೆಗೆ ಬಿದ್ದು ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ಮಿಸ್ ಮಾಲಿನಿ ಪತ್ರಿಕೆ ವರದಿ ಮಾಡಿದೆ.
ಅಂತರ ಪೀಸ್ ಹೆವೆನ್‌ನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಎರಡೂ ಕುಟುಂಬದ ಸದಸ್ಯರು, ಸ್ನೇಹಿತರು ಭಾಗವಹಿಸಿದ್ದರು. ಶಿವದಾಸನಿ ಆನೆ ಮೇಲೆ ಕುಳಿತುಕೊಂಡು ಮದುವೆ ಮಂಟಪಕ್ಕೆ ಭರ್ಜರಿ ಪ್ರವೇಶ ಮಾಡಿದರು.
ಮುಂಬೈನಿಂದ ತೆರಳಿದ ಪಂಡಿತರು ಹಾಗೂ ಶ್ರೀಲಂಕಾದ ಬುದ್ಧ ಸಂನ್ಯಾಸಿಗಳು ಮದುವೆ ಕಾರ್ಯಕ್ರಮ ನೆರವೇರಿಸಿಕೊಟ್ಟರು.
Next Story





