ಉಡುಪಿಯಲ್ಲಿ ಬಕ್ರೀದ್ ಸಡಗರ

ಉಡುಪಿ, ಸೆ.1: ಉಡುಪಿಯ ಜಾಮಿಯಾ ಮಸೀದಿ, ಅಂಜುಮಾನ್ ಮಸೀದಿ, ನಾಯರ್ ಕರೆ ಜುಮಾ ಮಸೀದಿ, ಸಂತೋಷ್ ನಗರದ ಬದ್ರಿಯಾ ಜುಮಾ ಮಸೀದಿ ಮತ್ತು ಇಂದ್ರಾಳಿ ನೂರಾನಿ ಮಸೀದಿಯ ಬಕ್ರೀದ್ ಪ್ರಯುಕ್ತ ಈದ್ ನಮಾಝ್ ಮತ್ತು ಖುತ್ಬಾ ಪ್ರವಚನ ನಡೆಯಿತು.
ಈದ್ ನಮಾಝ್ ನಲ್ಲಿ ಭಾಗವಹಿಸಿದ ಸಾವಿರಾರೂ ಮುಸ್ಲಿಮರು ಶುಭಾಶಯ ವಿನಿಮಯ ಮಾಡಿಕೊಂಡರು.
ಉಡುಪಿ ಸೇರಿದಂತೆ ನಗರದ ಬಹುತೇಕ ಎಲ್ಲ ಮಸೀದಿಗಳಲ್ಲೂ ಪ್ರಾರ್ಥನೆ, ಪ್ರವಚನ ನಡೆಯಿತು. ಈದ್‌ನ ಸಂದೇಶ ನೀಡಲಾಯಿತು. ನಮಾಝ್ನ ಬಳಿಕ ಎಲ್ಲರೂ ಹಸ್ತಲಾಘವ, ಆಲಿಂಗನದ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.
ಮನೆಗಳಲ್ಲೂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಿರಿ-ಕಿರಿಯರು, ನೆರೆ-ಹೊರೆಯವರೊಂದಿಗೆ ಹಬ್ಬದ ಶುಭಾಶಯ ಹಂಚಿಕೊಳ್ಳಲಾಯಿತು.
Next Story





