ಜೈಲಿನಲ್ಲಿ ಪ್ರತಿ ರಾತ್ರಿ ಗುರ್ಮಿತ್ ಸಿಂಗ್ ಪ್ರಲಾಪವೇನು?
ಸಹಕೈದಿಗಳಿಂದ ಬಯಲಾಯ್ತು ರೇಪ್ ಬಾಬಾನ ಗೋಳು

ರೋಹ್ಟಕ್, ಸೆ.1: ಕಳೆದ 9 ತಿಂಗಳುಗಳಿಂದ ಸುನಾರಿಯಾ ಜೈಲಿನಲ್ಲಿದ್ದು ಬಿಡುಗಡೆಯಾಗಿರುವ ದಲಿತ ನಾಯಕ ಕಿರಾಡ್ ಡೇರಾ ಸಜ್ಜಾ ಸೌದಾ ಮುಖ್ಯಸ್ಥ ಗುರ್ಮಿತ್ ಸಿಂಗ್ ಜೈಲಿನೊಳಗೆ ಪ್ರತಿರಾತ್ರಿ ಪಡುತ್ತಿರುವ ಪ್ರಲಾಪವನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ.
ಬಾಬಾ ಆಗಸ್ಟ್ 25ರ ಬಳಿಕ ಪ್ರತಿ ದಿನ ದೇವರೇ ನಾನೇನು ತಪ್ಪು ಮಾಡಿದೆ? ಎಂದು ಗೋಗರೆಯುತ್ತಿದ್ದಾನೆ. ನೆಲದ ಮೇಲೆ ಕುಳಿತ್ತಿರುವ ಆತ ಏನನ್ನೂ ತಿನ್ನುತ್ತಿಲ್ಲ. ಬರೀ ಬಿಸ್ಲರಿ ಬಾಟಲ್ ನೀರು, ಸ್ವಲ ಹಾಲು, ಚಹಾ ಹಾಗೂ ಬಿಸ್ಕಿಟ್ ತಿನ್ನುತ್ತಿದ್ದಾನೆ. ಇಡೀ ರಾತ್ರಿ ಆತ ಅಳುತ್ತಾ ಕುಳಿತುಕೊಂಡಿದ್ದಾನೆ ಎಂದು ಕಿರಾಡ್ ಹೇಳಿದ್ದಾರೆ.
ಸಿಂಗ್‌ಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಲಾಗುತ್ತಿಲ್ಲ. ಬಾಬಾನಿಗೆ ಜೀವ ಬೆದರಿಕೆ ಇರುವ ಕಾರಣ ಪ್ರತ್ಯೇಕ ಕೊಠಡಿಯಲ್ಲಿ ಇಡಲಾಗಿದೆ. ಬಾಬಾನ ವಿರುದ್ಧ ತೀರ್ಪು ಬಂದ ಬಳಿಕ ಪಂಜಾಬ್, ಹರ್ಯಾಣ ಹಾಗೂ ಇತರ ಪ್ರದೇಶಗಳಲ್ಲಿ ಹಿಂಸಾಚಾರ ನಡೆದಿರುವುದಕ್ಕೆ ಜೈಲಿನ ಕೈದಿಗಳು ಆಕ್ರೋಶಗೊಂಡಿದ್ದಾರೆ. ಕೈದಿಗಳು ಬಾಬಾನ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ದಲಿತ ನಾಯಕ ಹೇಳಿದ್ದಾನೆ.





