ಕದ್ರಿ ಮೈದಾನದಲ್ಲಿ ಚೀನಾ ವಸ್ತುಗಳ ಬಹಿಷ್ಕಾರ ಆಂದೋಲನ
ಮಂಗಳೂರು, ಸೆ.1: ನಗರದ ಕದ್ರಿ ಮೈದಾನದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಮಂಗಳೂರು ವತಿಯಿಂದ ಚೀನಾ ವಸ್ತುಗಳ ಬಹಿಷ್ಕಾರ ಅಂದೋಲನ ನಡೆಯಿತು.
ಮೇಡ್ ಇನ್ ಚೀನಾದ ಆಟಿಕೆ, ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಬೆಂಕಿ ನೀಡುವ ಮೂಲಕ ಪ್ರತಿಭಟನೆ ನಡೆಯಿತು.
ಆಂದೋಲನದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವ ಹಿಂದು ಪರಿಷತ್ ಪ್ರಾಂತ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಚೀನಾ ವಸ್ತುಗಳನ್ನು ಭಾರತದಲ್ಲಿ ಮಾರಾಟ ಮಾಡಿ, ಬಂದ ಲಾಭವನ್ನು ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡಲಾಗುತ್ತಿದೆ. ಭಾರತದ ಮಾರುಕಟ್ಟೆಯಿಂದ ಚೀನಾ ವಾರ್ಷಿಕ ಶೇ.17.50ರಷ್ಟು ವರಮಾನ ಪಡೆದುಕೊಳ್ಳುತ್ತಿದೆ. ಈ ಬಗ್ಗೆ ಭಾರತೀಯರು ಎಚ್ಚೆತ್ತುಕೊಳ್ಳಬೇಕು ಎಂದರು.
ಚೀನಾ ಉತ್ಪಾದಿಸಿದ ವಸ್ತುಗಳನ್ನು ಬಹಿಷ್ಕರಿಸದೇ ಇದ್ದಲ್ಲಿ ದೇಶಕ್ಕೆ ಮುಂದೆ ಅಪಾಯವಿದೆ. ಭಾರತೀಯರು ದೇಸಿ ತತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಅರು ಈ ಸಂದರ್ಭ ಕರೆ ನೀಡಿದರು.
ಬಜರಂಗದಳದ ಪ್ರಾಂತ ಸಂಯೋಜಕ ಶರಣ್ ಪಂಪ್‌ವೆಲ್, ವಿಶ್ವ ಹಿಂದೂ ಪರಿಷತ್ ಮಂಗಳೂರು ಇದರ ಜಿಲ್ಲಾ ಅಧ್ಯಕ್ಷ ಜಗದೀಶ್ ಶೇಣವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಜಿಲ್ಲಾ ಸಂಯೋಜ ಭುಜಂಗ ಕುಲಾಲ್, ನಗರ ಸಂಯೋಜಕ ಪ್ರವೀಣ್ ಕುತ್ತಾರು, ಹಿಂದೂ ಸಂಘಟನೆಯ ಪ್ರದೀಪ್ ಪಂಪ್‌ವೆಲ್, ಪುನೀತ್ ಪಂಪ್‌ವೆಲ್, ಉಮೇಶ್ ನಾಗುರಿ ಉಪಸ್ಥಿತರಿದ್ದರು.







