ಬೆಳ್ಳಿತೆರೆಗೆ ಬಿಡುಗಡೆಗೊಂಡ ತುಳು ಚಲನಚಿತ್ರ ‘ಪತ್ತನಾಜೆ’

ಕಲ್ಯಾಣಪುರ, ಸೆ.1: ಕರಾವಳಿಯ ಎರಡು ಜಿಲ್ಲೆಗಳ ಜನತೆ ಕಾತರದಿಂದ ಎದುರುನೋಡುತಿದ್ದ ಮುಂಬೈ ರಂಗಭೂಮಿಯ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನ ರಂಗಕರ್ಮಿ ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರು ಕಲಾಜಗತ್ತು ಕ್ರಿಯೇಷನ್ಸ್ ಮೂಲಕ ನಿರ್ಮಿಸಿ, ನಿರ್ದೇಶಿಸಿದ ತುಳುಚಿತ್ರ ‘ಪತ್ತನಾಜೆ’ ಶುಕ್ರವಾರ ಬೆಳ್ಳಿತೆರೆಗೆ ಬಿಡುಗಡೆಗೊಂಡಿತು.
ಕಲ್ಯಾಣಪುರ ಸಂತೆಕಟ್ಟೆಯ ಆಶೀರ್ವಾದ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನಕ್ಕೆ ಮೊದಲು ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮ ವನ್ನು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ದೀಪ ಬೆಳಗಿ ಉದ್ಘಾಟಿಸಿದರು.
ಕರಾವಳಿಯ ಆಚಾರ, ವಿಚಾರ, ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುತ್ತಿರುವ ತುಳುಭಾಷೆಗೆ ವಿಶಿಷ್ಟ ಸ್ಥಾನಮಾನವಿದೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರಾದೇಶಿಕ ಭಾಷೆಯಲ್ಲಿ ನೂರಾರು ಚಿತ್ರಗಳು ತೆರೆ ಕಾಣುತ್ತಿವೆ. ಪ್ರಾದೇಶಿಕ ಭಾಷೆಗಳ ಚಲನಚಿತ್ರಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕನ್ನಡ ಚಲನ ಚಿತ್ರೋದ್ಯಮಕ್ಕೆ ಸಿಗುವ ಎಲ್ಲಾ ಸವಲತ್ತುಗಳನ್ನು ತುಳು ಚಿತ್ರಕ್ಕೆ ನೀಡಬೇಕಾಗಿದೆ ಎಂದವರು ನುಡಿದರು.
ಕನ್ನಡದ ಹಿರಿಯ ನಟ ರಾಮಕೃಷ್ಣ ಮಾತನಾಡಿ, ಪತ್ತನಾಜೆ ತುಳು ಚಿತ್ರವು ಉತ್ತಮ ಛಾಯಾಗ್ರಹಣ, ಹಾಸ್ಯ, ನಟನೆ, ಸಂಗೀತ, ಪ್ರಕೃತಿ ಸೌಂದರ್ಯದ ಸಮ್ಮಿಲನವಾಗಿದೆ. ಸಿನಿಪ್ರಿಯರು ಟಾಕೀಸ್‌ನಲ್ಲಿ ನೋಡಿ ಚಿತ್ರಕ್ಕೆ ಪ್ರೋತ್ಸಾಹ ನೀಡುವ ಮೂಲಕ ಚಿತ್ರತಂಡವನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಕನ್ನಡದ ಹಿರಿಯ ನಟ ರಾಮಕೃಷ್ಣ ಮಾತನಾಡಿ, ಪತ್ತನಾಜೆ ತುಳು ಚಿತ್ರವು ಉತ್ತಮ ಛಾಯಾಗ್ರಹಣ, ಹಾಸ್ಯ, ನಟನೆ, ಸಂಗೀತ, ಪ್ರಕೃತಿ ಸೌಂದರ್ಯದ ಸಮ್ಮಿಲನವಾಗಿದೆ. ಸಿನಿಪ್ರಿಯರು ಟಾಕೀಸ್‌ನಲ್ಲಿ ನೋಡಿ ಚಿತ್ರಕ್ಕೆ ಪ್ರೋತ್ಸಾಹ ನೀಡುವ ಮೂಲಕ ಚಿತ್ರತಂಡವನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಮಾಜಿ ಶಾಸಕ ಕೆ.ರಘಪತಿ ಭಟ್, ತೋನ್ಸೆ ವಿಜಯ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಮನೋಹರ್ ಶೆಟ್ಟಿ, ಉದಯ ಶೆಟ್ಟಿ ಮುನಿಯಾಲು, ರಘರಾಮ ಶೆಟ್ಟಿ ಕಂಡಾಳ ತೋನ್ಸೆ, ಫ್ರಾಂಕ್ ಫೆರ್ನಾಂಡಿಸ್, ಹರೀಶ್, ನಟಿ ರೇಷ್ಮಾ, ನಟ ಸೂರ್ಯರಾವ್, ಖಳನಟ ಪ್ರತೀಕ್ ಶೆಟ್ಟಿ, ಎರ್ಮಾಳ್ ಶಶಿಧರ್ ಕೆ.ಶೆಟ್ಟಿ, ಕೊಡವೂರು ದಿವಾಕರ ಶೆಟ್ಟಿ, ಕೆ. ಸುಧಾಕರ ಆಚಾರ್ಯ ಉಪಸ್ಥಿತರಿದ್ದರು.
ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ನಗರಸೆಅ್ಯಕ್ಷೆ ಮೀನಾಕ್ಷಿ ಮಾವಬನ್ನಂಜೆ,ಮಾಜಿಶಾಸಕಕೆ.ರಘಪತಿಟ್, ತೋನ್ಸೆ ವಿಜಯ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಮನೋಹರ್ ಶೆಟ್ಟಿ, ಉದಯ ಶೆಟ್ಟಿ ಮುನಿಯಾಲು, ರಘರಾಮ ಶೆಟ್ಟಿ ಕಂಡಾಳ ತೋನ್ಸೆ, ್ರಾಂಕ್ ರ್ನಾಂಡಿಸ್, ಹರೀಶ್, ನಟಿ ರೇಷ್ಮಾ, ನಟ ಸೂರ್ಯರಾವ್, ಖಳನಟ ಪ್ರತೀಕ್ ಶೆಟ್ಟಿ, ಎರ್ಮಾಳ್ ಶಶಿರ್‌ಕೆ.ಶೆಟ್ಟಿ,ಕೊಡವೂರುದಿವಾಕರಶೆಟ್ಟಿ,ಕೆ.ಸುಾಕರ ಆಚಾರ್ಯ ಉಪಸ್ಥಿತರಿದ್ದರು. ಉಡುಪಿ ಪತ್ತನಾಜೆ ತುಳು ಚಲನಚಿತ್ರ ಸಮಿತಿ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಸ್ವಾಗತಿಸಿದರು. ಈಶ್ವರ ಚಿಟ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಸತೀಶ್ಚಂದ್ರ ಶೆಟ್ಟಿ ವಂದಿಸಿದರು.
ಸಮಾರಂಭದಲ್ಲಿ ಮಿಸ್ ಟೀನ್ ಗ್ರಾಂಡ್ ಸೀ ಯೂನಿವರ್ಸ್ ವಿಜೇತೆ ಶಾಸಾ ಶೆಟ್ಟಿ ಹಾಗೂ ವರ್ಷಾ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.







