ಎಲ್‌ಒಸಿಯಲ್ಲಿ ದಾಳಿ: ಸಹಾಯಕ ಇನ್‌ಸ್ಪೆಕ್ಟರ್ ಬಲಿ

ಜಮ್ಮು, ಸೆ. 1: ಗಡಿ ನಿಯಂತ್ರಣ ರೇಖೆಯಾಚೆಗಿನ ಅಜ್ಞಾತ ಸ್ಥಳದಿಂದ ಪಾಕಿಸ್ತಾನ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಗಡಿಭಾಗದಲ್ಲಿ ಕಾವಲು ಕಾಯುತ್ತಿದ್ದ ಬಿಎಸ್‌ಎಫ್‌ನ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಜಮ್ಮುವಿನಿಂದ ಸುಮಾರು 250 ಕಿಲೋಮೀಟರ್ ದೂರದ ಪೂಂಚ್ ಜಿಲ್ಲೆಯ ಕೃಷ್ಣಘಾಟಿ ಎಂಬಲ್ಲಿ ಕಾವಲು ಕಾಯುತ್ತಿದ್ದ ಕಮಲ್‌ಜೀತ್ ಸಿಂಗ್ ಗುಂಡೇಟಿಗೆ ಬಲಿಯಾದವರು ಎಂದು ಗುರುತಿಸಲಾಗಿದೆ.
ಗಡಿ ನಿಯಂತ್ರಣ ರೇಖೆಯಿಂದಾಚೆಗಿನ ಅಜ್ಞಾನ ಪ್ರದೇಶದಿಂದ ನಡೆದ ದಾಳಿಯಲ್ಲಿ ಸಿಂಗ್ ತೀವ್ರವಾಗಿ ಗಾಯಗೊಂಡರು. ತಕ್ಷಣ ಅವರನ್ನು ಶಿಬಿರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದರೂ ಅವರು ಮೃತಪಟ್ಟರು ಎಂದು ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
1988ರಲ್ಲಿ ಗಡಿಭದ್ರತಾ ಪಡೆ ಸೇರಿದ್ದ ಸಿಂಗ್ (50) ಅವರು, ಪಂಜಾಬ್‌ನ ಭಟಿಂಡಾ ಜಿಲ್ಲೆಯ ಮಲ್ಕಾನಾ ಗ್ರಾಮದವರು.
Next Story





