ಕ್ರೀಡೆಗಳು ಆತ್ಮಸ್ಥೈರ್ಯ, ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ: ಶ್ರೀನಿವಾಸ್ ನಾಯ್ಡು

ಹನೂರು, ಸೆ.1: ಚಾಮರಾಜನಗರ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾಗಿ ವಿಭಾಗ ಮಟ್ಟಕ್ಕೆಆಯ್ಕೆಯಾದ ಸರ್ಕಾರಿ ಪ್ರೌಡಶಾಲೆಯ ಕೂಡಲೂರು ಮಕ್ಕಳನ್ನು ಸನ್ಮಾನಿಸಿಲಾಯಿತು.
ಪಟ್ಟಣದ ಬಿಆರ್‍ಸಿ ಕೇಂದ್ರದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಬಿಆರ್‍ಪಿ ಶ್ರೀನಿವಾಸ್ ನಾಯ್ಡು, ಮಕ್ಕಳು ಶಿಕ್ಷಣದೂಂದಿಗೆ ಪಠೇತ್ಯರ ಚಟುವಟಿಕೆಗಳಾದ ಕ್ರೀಡೆಗಳಲ್ಲಿ ಭಾಗವಹಿಸಿದರೆ ಆತ್ಮಸ್ಥೈರ್ಯ, ನಾಯಕತ್ವಗುಣ, ಸಾಮರಸ್ಯ ಗುಣಗಳು ಬೆಳೆಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರೌಡಶಾಲೆ ಸಹಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಪ್ಪ, ಶಿಕ್ಷಕರಾದ ಕಂದವೇಲು, ದೈಹಿಕ ಶಿಕ್ಷಕ ವಂಜಲ್, ಶಿಕ್ಷಕ ಕೃಷ್ಣ ಇನ್ನಿತರರು ಹಾಜರಿದ್ದರು.
Next Story





