ದ.ಕ ಜಿಲ್ಲಾ ಕಿಚ್ಚಾ ಸುದೀಪ್ ಅಭಿಮಾನಿಗಳ ಸಂಘದ ವತಿಯಿಂದ ಪುಸ್ತಕ ವಿತರಣೆ
ಮಂಗಳೂರು, ಸೆ. 2: ದ.ಕ. ಜಿಲ್ಲಾ ಕಿಚ್ಚಾ ಸುದೀಪ್ ಅಭಿಮಾನಿಗಳ ಸಂಘ ಮಂಗಳೂರು ಇದರ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಜೈ ಕಾಪಿಕಾಡ್ ಇಲ್ಲಿನ 78 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಅಧ್ಯಕ್ಷ ಸುದೀಪ್ ಚೊಕ್ಕಾಡಿ, ಜಿಲ್ಲಾ ಕಾರ್ಯದರ್ಶಿ ಸಂದೀಪ್ ಯು., ಪ್ರಾಧಾನ ಕಾರ್ಯದರ್ಶಿ ಮಂಜುನಾಥ್ ನಾಯಕ್ , ಸಂಘಟನಾ ಕಾರ್ಯದರ್ಶಿ ಮನೋಜ್ ಶೆಟ್ಟಿ, ಜೊತೆ ಕಾರ್ಯದರ್ಶಿ ಲೋಹಿತ್ ಆಚಾರ್ಯ, ಶಾಲಾ ಮುಖ್ಯೊಪಧ್ಯಾಯಿನಿಯರಾದ ಪಾವನ ಕೆ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸಹ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.
Next Story