ಮಸಾಜ್ ಮಾಡಲು ಹನೀಪ್ರೀತ್ ನನ್ನ ಜೊತೆ ಜೈಲಿನಲ್ಲಿರಲಿ: ರೇಪ್ ಬಾಬಾ ಗುರ್ಮಿತ್ ನ ಬೇಡಿಕೆ !

ಹೊಸದಿಲ್ಲಿ, ಸೆ.2: ಇಬ್ಬರು ಸಾಧ್ವಿಗಳ ಮೇಲೆ ಅತ್ಯಾಚಾರಗೈದ ಪ್ರಕರಣದಲ್ಲಿ ಜೈಲುಶಿಕ್ಷೆಗೊಳಗಾದ ಬಾಬಾ ಗುರ್ಮೀತ್ ಸಿಂಗ್ ಮಸಾಜ್ ಮಾಡಲು ‘ದತ್ತುಪುತ್ರಿ’ಯೂ ತನ್ನ ಜೊತೆ ಇರಬೇಕೆಂದು ಹಠ ಹಿಡಿದಿದ್ದು, ಸಿಬಿಐ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾನೆ. ತನ್ನ ಆರೈಕೆ ಹಾಗೂ ಮಸಾಜ್ ಮಾಡುವ ‘ದತ್ತುಪುತ್ರಿ’ ಹನೀಪ್ರೀತ್ ತನ್ನ ಜೊತೆ ಇರಲು ಅವಕಾಶ ಮಾಡಿಕೊಡಬೇಕೆಂದು ಆತ ಮನವಿಯಲ್ಲಿ ತಿಳಿಸಿದ್ದ. ಆದರೆ ನ್ಯಾಯಾಲಯ ಈ ಮನವಿಯನ್ನು ನಿರಾಕರಿಸಿದೆ.
ಗುರ್ಮೀತ್ ಸಿಂಗ್ ತಪ್ಪಿಸಿಕೊಳ್ಳಲು ಹನೀಪ್ರೀತ್ ಸಂಚು ರೂಪಿಸಿದ್ದಳು ಎನ್ನುವ ವಿಚಾರ ಬೆಳಕಿಗೆ ಬಂದ ನಂತರ ಹನೀಪ್ರೀತ್ ಪತ್ತೆಗಾಗಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ. ಹನೀಪ್ರೀತ್ ಹಾಗೂ ಗುರ್ಮೀತ್ ಅಕ್ರಮ ಸಂಬಂಧವನ್ನು ಹೊಂದಿದ್ದಾರೆ ಎಂದು ಆಕೆಯಿಂದ ದೂರವಾದ ಪತಿ ‘ಮೇಲ್ ಟುಡೆ’ಗೆ ಹೇಳಿದ್ದಾರೆ.
ಗುರ್ಮೀತ್ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದ ನಂತರ ನಾವಿಬ್ಬರೂ ಒಟ್ಟಿಗೆ ಇರಲು ಅವಕಾಶ ಕಲ್ಪಿಸಬೇಕು ಎಂದು ಗುರ್ಮೀತ್ ಮತ್ತು ಹನಿಪ್ರೀತ್ ಮನವಿ ಮಾಡಿಕೊಂಡಿದ್ದರು. ವಕೀಲರ ಮೂಲಕ ಹನಿಪ್ರೀತ್ ಅರ್ಜಿ ಸಲ್ಲಿಸಿದ್ದಳು. ಆದರೆ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು.





