ದ್ವಿತೀಯ ಪಿಯು ಅಂಕಪಟ್ಟಿಯಲ್ಲಿ ಭಾಷಾ ಮಾಧ್ಯಮ ನಮೂದು

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.2: ದ್ವಿತೀಯ ಪಿಯು ಅಂಕಪಟ್ಟಿಯಲ್ಲಿ ವಿದ್ಯಾರ್ಥಿಗಳ ಭಾಷಾ ಮಾಧ್ಯಮವನ್ನು ನಮೂದಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸೆಸೆಲ್ಸಿ ಅಂಕಪಟ್ಟಿಯಲ್ಲಿ ಭಾಷಾ ಮಾಧ್ಯಮ ನಮೂದಿಸುತ್ತದೆ. ಅದೇ ಮಾದರಿಯಲ್ಲಿ 2017-18ನೆ ಸಾಲಿನಿಂದ ಪಿಯು ಪರೀಕ್ಷೆ ಬರೆದು ತೇರ್ಗಡೆಯಾಗುವ ವಿದ್ಯಾರ್ಥಿಗಳು ಯಾವ ಮಾಧ್ಯಮದಲ್ಲಿ ಓದಿದ್ದಾರೆ ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ದ್ವಿತೀಯ ಪಿಯು ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಿದ್ಯಾರ್ಥಿಯ ಮಾಧ್ಯಮವನ್ನು ಸೇರಿಸಬೇಕು. ಪ್ರವೇಶ ಪತ್ರದಲ್ಲಿಯೂ ಅದನ್ನು ನಮೂದಿಸಲಾಗುತ್ತದೆ. ಹೀಗಾಗಿ 2017-18ನೆ ಸಾಲಿನ ವಿದ್ಯಾರ್ಥಿಗಳು ತಮ್ಮ ಅಧ್ಯಯನ ಮಾಧ್ಯಮವನ್ನು ಬದಲಾಯಿಸಿಕೊಳ್ಳಲು ಸೆಪ್ಟಂಬರ್ 30ರವರೆಗೆ ಅವಕಾಶ ನೀಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಉಲಾಖೆಯ ನಿರ್ದೇಶಕಿ ಸಿ.ಶಿಖಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





