ನನ್ನ ವಿರುದ್ಧದ ಆರೋಪಗಳು ಆಧಾರ ರಹಿತ: ಸುಭಾಷ್‌ಚಂದ್ರ ಕುಂಟಿಯಾ

ಬೆಂಗಳೂರು, ಸೆ. 2: ಕೇಂದ್ರದ ಎರವಲು ಸೇವೆಗೆ ತೆರಳಲು ಯತ್ನಿಸುತ್ತಿರುವ ಮುಖ್ಯ ಕಾರ್ಯದರ್ಶಿ ರಾಜ್ಯ ಸರಕಾರದ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ಕೆಲ ಮಾಧ್ಯಮಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ ತಳ್ಳಿ ಹಾಕಿದ್ದಾರೆ. ನನ್ನ ವಿರುದ್ಧದ ಆರೋಪಗಳು ಆಧಾರ ರಹಿತ ಹಾಗೂ ಸತ್ಯಕ್ಕೆ ದೂರವಾದುದು. ಇಂತಹ ಕಪೋಲಕಲ್ಪಿತ ಕಥೆಗಳು ಕೆಲವರಿಗೆ ಸಂತಸ ಉಂಟು ಮಾಡಬಹುದು. ಆದರೆ, ಪ್ರಾಮಾಣಿಕ ಅಧಿಕಾರಿಗಳಿಗೆ ನೋವುಂಟು ಮಾಡುತ್ತವೆ. ಪ್ರತಿದಿನವೂ ಪತ್ರ ವ್ಯವಹಾರಗಳು ಹಾಗೂ ಕಡತ ವಿಲೇವಾರಿಯತ್ತ ವೈಯಕ್ತಿಕ ಗಮನಹರಿಸಿ ಕರ್ನಾಟಕದ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ತಮಗೆ ಇಂತಹ ವದಂತಿಗಳಿಂದ ನೋವಾಗಿದೆ ಎಂದು ಸುಭಾಷ್‌ಚಂದ್ರ ಕುಂಟಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





