ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ : ಹನ್ನೆರಡು ಆರೋಪಿಗಳ ಬಂಧನ, ಐವರು ಮಹಿಳೆಯರ ರಕ್ಷಣೆ

ಬೆಂಗಳೂರು,ಎ.2: ಹೊರ ರಾಜ್ಯದ ಮಹಿಳೆಯರನ್ನು ಕರೆತಂದು ನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ 12 ಮಂದಿ ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 5 ಮಹಿಳೆಯರನ್ನು ರಕ್ಷಿಸಿದ್ದಾರೆ.
ಬಂಧಿತರನ್ನು ಅಸ್ಸಾಂನ ರಿಷಿ ವರ್ಮಾ(26), ಗಿರಾಕಿಗಳಾದ ಹೊಸಕೋಟೆಯ ಸತೀಶ್ ಗೌಡ, ಬಂಟ್ವಾಳದ ಮುಹಮ್ಮದ್ ರಫೀಕ್(40), ಮಹಾರಾಷ್ಟ್ರದ ರಜತ್ ಮಿಥಲ್(29), ನಾಗಮಂಗಲದ ಹರೀಶ್(25), ಬಿಟಿಎಂ ಬಡಾವಣೆಯ ಶ್ರೀನಿವಾಸರೆಡ್ಡಿ, ಬಸವೇಶ್ವರನಗರದ ಮಂಜುನಾಥ, ವೈಟ್‌ಫೀಲ್ಡ್‌ನ ಕೆ.ಶೇಷಾದ್ರಿ (27), ವಿ.ಎಸ್. ಗಾರ್ಡನ್ ಎಸ್.ಮುಕೇಶ್‌ಕುಮಾರ್(28), ಹೆಬ್ಬಾಳದ ಹರೀಶ್, ಎಚ್‌ಎಸ್‌ಆರ್ ಮುಖ್ಯರಸ್ತೆಯ ರಾಘವೇಂದ್ರ ರೆಡ್ಡಿ (28), ಜೀವನ್‌ಭೀಮಾನಗರ ಅನಿಲ್(28) ಬಂಧಿತ ಆರೋಪಿಗಳಾಗಿದ್ದಾರೆ.
ಎಚ್‌ಬಿಆರ್ ಬಡಾವಣೆಯ ರಾಸ್ತಾ ರೆಸ್ಟೋರೆಂಟ್ ಹಿಂಭಾಗದ ಮನೆಯೊಂದರಲ್ಲಿ ಹೊರ ರಾಜ್ಯದ ಮಹಿಳೆಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ 1,45,850 ರೂಗಳನ್ನು ವಶಪಡಿಸಿಕೊಂಡು 5 ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರವಿ ತಿಳಿಸಿದ್ದಾರೆ.





