ಚಿನ್ನದ ಅಂಗಡಿಯಲ್ಲಿ ಕಳ್ಳತನ: ಗ್ರಾಹಕರ ಸೋಗಿನಲ್ಲಿ ಬಂದ ತಂಡದಿಂದ ಕೃತ್ಯ
ಚಿಕ್ಕಮಗಳೂರು, ಸೆ.2: ಗ್ರಾಹಕರ ಸೋಗಿನಲ್ಲಿ ಒಳ ಬಂದಿರುವ ಚೋರರ ತಂಡವೊಂದು ಸುಮಾರು 1.65 ಲಕ್ಷ ಬೆಲೆ ಬಾಳುವ 50 ಗ್ರಾಂ ತೂಕದ ಬಂಗಾರ ಉಂಗುರವನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಗರದ ಎಂ.ಜಿ.ರಸ್ತೆಯಲ್ಲಿರೋ ಕೊಹಿನೂರ್ ಜ್ಯೂವೆಲ್ ಪ್ಯಾಲೇಸ್ ನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ನಿನ್ನೆ ಬೆಳ್ಳಿಗೆ ಗ್ರಾಹಕರಂತೆ 5/6 ಮಂದಿಯ ತಂಡವೊಂದು ನಗರದ ಗಜೇಂದ್ರ ಎಂಬವರ ಮಾಲೀಕತ್ವದ ಕೊಹಿನೂರ್ ಚಿನ್ನದ ಅಂಗಡಿಗೆ ಬಂದಿದ್ದಾರೆ. ಗ್ರಾಹಕರಂತೆ ಇಬ್ಬರು ಬಂದು ಚಿನ್ನ, ಬೆಳ್ಳಿ ತೋರಿಸುವಂತೆ ಅಂಗಡಿ ಮಾಲೀಕನಿಗೆ ಹೇಳಿದ್ದಾರೆ. ನಂತರ ಒಬ್ಬರ ಹಿಂದೆ ಒಬ್ಬರು ಅಂಗಡಿ ಒಳಗೆ ಪ್ರವೇಶ ಮಾಡಿ ನಂತರ ಮಾಲೀಕರ ಗಮನ ಬೇರೆಡೆ ಸೆಳೆದು ಮಾಲೀಕನ ಎದುರೇ ಉಂಗುರ ಕಿಟ್ ವೊಂದನ್ನ ದೋಚಿ ಒಬ್ಬರ ಹಿಂದೆ ಒಬ್ಬರು ಪರಾರಿಯಾಗಿದ್ದಾರೆ.
ಸುಮಾರು 50 ಗ್ರಾಂ ಚಿನ್ನಾಭರಣದ ಮೇಲೆ ಚೋರರು ತಮ್ಮ ಕೈಚಳಕ ತೋರಿದ್ದು ಅಂಗಡಿ ಮಾಲೀಕ ಕಂಗಲಾಗಿದ್ದಾರೆ. ಈ ಖತರ್ನಾಕ್ ಗ್ಯಾಂಗ್ ನ ಕೈಚಳಕದ ದೃಶ್ಯಾವಳಿಗಳು ಸಿಸಿಟಿವಿ ಸೆರೆಯಾಗಿದ್ದು ನಗರ ವಾಸಿಗಳನ್ನು ಬೆಚ್ಚಿ ಬೀಳಿಸಿದೆ.
ಅಂಗಡಿಯಲ್ಲಿ ಒಬ್ಬರೇ ಇರೋದನ್ನು ಗಮನಿಸಿದ ಈ ಕಳ್ಳರ ತಂಡ ಒಬ್ಬರೊಬ್ಬರು ಮಾಲೀಕನಿಗೆ ಕಾಣದಂತೆ ಅಡ್ಡಲಾಗಿ ನಿಂತು ಸುಮಾರು 50 ಗ್ರಾಂ ತೂಕದ 1.65 ಲಕ್ಷ ಬೆಲೆ ಬಾಳುವ ಉಂಗುರ ಕಿಟ್ ದೋಚಿದ್ದಾರೆ. ಸದ್ಯ ಚೋರರ ಕೈಚಳಕದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸರೆಯಾಗಿವೆ. ಇದೇ ತಂಡ ಬೇರೆ ಬೇರೆ ಜಿಲ್ಲೆಗಳಲ್ಲಿ ಬಟ್ಟೆ ಅಂಗಡಿಯಲ್ಲಿ ಕಳ್ಳತನ ಮಾಡಿದೆ ಎಂಬ ಮಾಹಿತಿ ಹೊರಬಿದ್ದಿದೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿ ಆರೋಪಿಗಳಿಗೆ ಬಲೆ ಬೀಸಿದ್ದಾರೆ.







